ಜಿಲ್ಲಾ ಸುದ್ದಿ

ಕೋವಿಡ್ ಸಂತ್ರಸ್ತರಿಗೆ ದಿನಸಿ, ಮೆಡಿಕಲ್ ಕಿಟ್ ವಿತರಿಸಿದ ಸಮಾಜಸೇವಕ ರೊನಾಲ್ಡ್ ಕೊಲಾಸೊ 

ದೇವನಹಳ್ಳಿ : ಅನಿವಾಸಿ ಭಾರತೀಯ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ ಅವರಿಂದ ಕೋವಿಡ್ ಲಾಕ್ ಡೌನ್ ನಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್ ಮತ್ತು ಮೆಡಿಕಲ್ ಕಿಟ್ ಗಳ ವಿತರಣೆ.

ಶಿಕ್ಷಣ, ಆರೋಗ್ಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಕೊಡುಗೈ ದಾನಿ ಎಂದೆ ಹೆಸರಾಗಿರುವ ಅನಿವಾಸಿ ಭಾರತೀಯ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ ಅವರು ಮಹಾ ಯುವರಂಗ ಯುವಕ ಸಂಘದ ಸಹಯೋಗದಲ್ಲಿ ಬೆಂಗಳೂರು ಗ್ರಾಮಾಂತರ ಭಾಗ ಮತ್ತು ದೇವನಹಳ್ಳಿ ತಾಲೂಕು ಮತ್ತು ಸುತ್ತ-ಮುತ್ತ ಇರುವ ಎಲ್ಲಾ ಕೋವಿಡ್ ಪ್ರೆಂಟ್ ಲೈನ್ ವಾರಿಯರ್ ಗಳಿಗೆ ದಿನಸಿ ಕಿಟ್ ಗಳನ್ನು ಮತ್ತು ಮೆಡಿಕಲ್ ಕಿಟ್ ಗಳನ್ನು ವಿತರಿಸಿದ್ದಾರೆ.

ಕಳೆದ ಎರಡು ವಾರಗಳಿಂದ ಕೋವಿಡ್ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಸುಮಾರು 6000 ಕುಟುಂಬ ಗಳಿಗೆ ದಿನಸಿ ಪದಾರ್ಥಗಳ ಕಿಟ್ ಗಳನ್ನು ವಿತರಿಸಲಾಗಿದೆ. ಇನ್ನೂ ಅಗತ್ಯವಿದ್ದವರನ್ನು ಗುರುತಿಸಿ ಅವರಿದ್ದಲ್ಲಿಗೆ ಹೋಗಿ ಕಿಟ್ ಗಳನ್ನು ವಿತರಿಸಲಾಗುವುದು ಎಂದು ಮಹಾಯುವರಂಗದ ನಿರ್ವಾಹಕ ನಾಗರಾಜ್ ಪೂಜಾರಿ ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button