ಡಿಕೆಶಿ ನೇತೃತ್ವದಲ್ಲಿ ಹಲವು ಮಂದಿ ಕಾಂಗ್ರೆಸ್ಸಿಗೆ ಬರ್ತಾರೆ: ಎಸ್ ರವಿ

ರಾಮನಗರ: ಕಾಂಗ್ರೆಸ್ ಪಕ್ಷ ತಮಗೆ ಅವಕಾಶ ನೀಡಿತ್ತು. ಎರಡು ಜಿಲ್ಲೆಗಳ ಮುಖಂಡರು ನನ್ನ ಗೆಲುವಿಗೆ ಶ್ರಮಿಸಿದ್ದಾರೆ. 724 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದನೆ ಎಂದು ನೂತನ ವಿಧಾನ ಪರಿಷತ್ತಿನ ಸದಸ್ಯ ಎಸ್. ತಿಳಿಸಿದರು.
ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂಧನೆ ಸ್ವೀಕರಿಸಿ, ನಂತರ ಸುದ್ದಿಗಾರರ ಜೊತೆ ಮಾತನಾಡಿದ ಎಸ್. ರವಿ, ಎಂಟು ವಿಧಾನಸಭಾ ಕ್ಷೇತ್ರಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಮೂಲಕ ಧನ್ಯವಾದಗಳನ್ನು ಹೇಳುತ್ತಿದ್ದೆನೆ ಎಂದು ಹೇಳಿದರು.
ಡಿಕೆಶಿ ಹಾಗು ಸಿದ್ದರಾಮಯ್ಯ ಅವರ ಆರ್ಶಿವಾದ ವೀರಪ್ಪಮೊಯ್ಲಿ, ಡಿ.ಕೆ.ಸುರೇಶ್ ಹಾಗು ಶಾಸಕರ ನೆರವಿನಿಂದ ಗೆಲುವು ಸಾಧಿಸಿದ್ದೆನೆ. ಇದು ಎಸ್.ರವಿ ಗೆಲುವಲ್ಲ. ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಅವರ ಗೆಲುವು. ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ. ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಗಳೆ ಗೆಲುವು ಸಾಧಿಸುವುದು ವಾಡಿಕೆ. ಆದರೆ, ಹಾನಗಲ್ ನಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವ ಮೂಲಕ ಪಕ್ಷಕ್ಕೆ ಶುಭ ಶಕುನ ಶುರುವಾಗಿದೆ ಎಂದರು.
ಎಂಎಲ್ಸಿ ಚುನಾವಣೆ ಇದಕ್ಕೆ ದಾರಿ ಮಾಡಿಕೊಟ್ಟಿದೆ. ರಾಜಕೀಯ ಪ್ರಜ್ಞಾವಂತರ ಕ್ಷೇತ್ರದ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷದ ಸಮಕ್ಕೆ ಗೆಲುವು ಸಾಧಿಸಿದೆ. ಮುಂದಿನ ಭವಿಷ್ಯಕ್ಕೆ ಕಾಂಗ್ರೆಸ್ ಪಕ್ಷ ಬೇಕು ಎಂಬುದನ್ನು ಈ ಚುನಾವಣೆ ಸ್ಪಷ್ಟವಾಗಿ ಹೇಳಿದೆ. ಎಲ್ಲರ ಸಂಘಟಿತದ ಹೋರಾಟದ ಪರವಾಗಿ ಗೆಲುವು ಸಾಧಿಸಿದ್ದನೆ. ಆತರಿಕ ಸಮೀಕ್ಷೆಯಲ್ಲಿ ಇಷ್ಟು ದೊಡ್ಡದ ಮತಗಳಿರಲಿಲ. 2 ಸಾವಿರದ ಆಸುಪಾಸಿನಲ್ಲೇ ಇತ್ತು. ನಮ್ಮ ನಿರೀಕ್ಷೆಯನ್ನು ಮೀರಿ ಫಲಿತಾಂಶ ಬಂದಿದೆ ಎಂದು ಹೇಳಿದರು.
ಜೆಡಿಎಸ್ ವರಿಷ್ಠರ ಹೇಳಿಕೆ ಗೊಂದಲಗಳಿಗೆ ಕಾರಣವಾಗಿದೆ. ದಿನಕ್ಕೊಂದು ಹೇಳಿಕೆ ನೀಡುವ ನಾಯಕರಲ್ಲಿಯು ಗೊಂದಲ ಉಂಟಾಗಿತ್ತು. ಇಲ್ಲಿಯು ಸಹ ಬಿಜೆಪಿ ಹಾಗು ಜೆಡಿಎಸ್ ನಡುವೆ ಹೊಂದಾಣಿಕೆ ಆಗಿತ್ತು. ದೊಡ್ಡಬಳ್ಳಾಪುರ ಹೊಸಕೋಟೆಯಲ್ಲಿ ಎಂಟಿಬಿ ನೇರವಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಚನಪಟ್ಟಣದಲ್ಲಿ ಹೊಂದಾಣಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿಸರು.
ಇಬ್ಬರು ಉಸ್ತುವಾರಿ ಸಚಿವರಿದ್ದರೂ, ಬಡಪಾಯಿ ನಾರಾಯಾಣಸ್ವಾಮಿ ಕರೆತನಮದು 54 ಮತ ಹಾಕಿಸಿದ್ದಾರೆ. ಮುಂದೆ ಬಿಜೆಪಿ ಕಟ್ಟುತ್ತೆನೆ ಎಂದವರ ಪಾಡೇನು? ಇವರಿಬ್ಬರ ಸಾಮರ್ಥ್ಯ ಏನು ಎಂದು ಸಚಿವರಾದ ಅಶ್ವತ್ಥನಾರಾಯಣ, ಎಂಟಿಬಿ ನಾಗರಾಜು ಅವರಿಗೆ ಟಾಂಗ್ ನೀಡಿದರು.
ಈ ಚುನಾವಣೆಗೆ ಭಾಷಣ, ತತ್ವ ಸಿದ್ದಾಂತದ ಈ ಚುನಾವಣೆಗೆ ಸೀಮಿತವಲ್ಲ. ಅದಕ್ಕೆ ಬೇಕಿರುವ ಮದ್ದುಗುಂಡುಗಳನ್ನು ಸಮರ್ಥವಾಗಿ ಪೂರೈಸುತ್ತೇವೆ ಎಂದು ಹಣದ ಹೊಳೆಯನ್ನೆ ಜೆಡಿಎಸ್ ಹರಿಸಿತ್ತು. ಆದರೆ , ಇದು ಫಲ ನೀಡಲಿಲ್ಲ. ನಮ್ಮದು ಎರಡು ಸಾವಿರ ಮತಗಳಷ್ಟೆ. ಆದರೆ, ಅನ್ಯ ಪಕ್ಷಗಳು ಮತ ಹಾಕಿವೆ. ಈಗ 2023ರಲ್ಲಿ ಬಿಜೆಪಿ ಹಾಗು ಜೆಡಿಎಸ್ ಸಹವಾಸವೆದ ಬೇಡ ಎನ್ನುತ್ತಿವೆ ಎಂದು ಕುಟುಕಿದರು.
ಅಪವಿತ್ರ ಮೈತ್ರಿ, ಹಣದ ಹೊಳೆ ಮದ್ದುಗುಂಡುಗಳು ಸಹ ಕೆಲಸ ಮಾಡಿಲ್ಲ. ಇಂತಹ ಅತ್ಯಧಿಕ ಮತ ಯಾವತ್ತು ಬಂದಿರಲಿಲ್ಲ. ಈ ಚುನಾವಣೆ ಮೂಲಕ ಕಾಂಗ್ರೆಸ್ ಗೆ ಈ ಜಿಲ್ಲೆ ಭದ್ರಕೋಟೆ ಎಂಬುದು ಸಾಬೀತುಗೊಂಡಿದೆ ಎಂದರು.




