ಜಿಲ್ಲಾ ಸುದ್ದಿಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್ಹುಬ್ಬಳ್ಳಿ - ಧಾರವಾಡ

ಪುನೀತ್ ಪೋಸ್ಟರ್ ಗೆ ಸಾವಜಿ ಮಟನ್ ನೈವೇದ್ಯ: ದಿನವಿಡಿ ಅಭಿಮಾನಿಗಳಿಗೆ ಮಟನ್ ಊಟ

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಐದು ತಿಂಗಳು ಹತ್ತಿರವಾಗಿದ್ರು ಅಭಿಮಾನಿಗಳು ಮಾತ್ರ ಅಪ್ಪು ಇಲ್ಲ ಅನ್ನೋದನ್ನ ಒಪ್ಪಿಕೊಳ್ಳೋಕೆ ಸಿದ್ದರಿಲ್ಲ. ಅಪ್ಪು ನಮ್ಮ ಮಧ್ಯೆಯೇ ಇದ್ದಾರೆ ಎಂದುಕೊಂಡು ದಿನ ದೂಡುತ್ತಿದ್ದಾರೆ. ಇದೀಗ ಹುಬ್ಬಳ್ಳಿಯ ಪುನೀತ್ ಅಭಿಮಾನಿಗಳು ವಿಭಿನ್ನವಾಗಿ ಅಪ್ಪು ಅವರನ್ನ ಸ್ಮರಿಸಿದ್ದಾರೆ.

ಪುನೀತ್ ರಾಜಕುಮಾರ ಅವರಿಗೂ ಹುಬ್ಬಳ್ಳಿಗೂ ಅವಿನಾಭಾವ ಸಂಬಂಧವಿದೆ. ಪುನೀತ್ ರಾಜಕುಮಾರ್ ಹುಬ್ಬಳ್ಳಿಗೆ ಭೇಟಿ‌ ನೀಡಿದ ಸಂದರ್ಭದಲ್ಲಿ ಸಾವಜಿ ಮಟನ್ ಊಟ ಸವಿಯದೆ ತೆರಳುತ್ತಿರಲಿಲ್ಲ. ಹಾಗಾಗಿ ಜೈ ರಾಜವಂಶ ಅಭಿಮಾನಿಗಳ ಸಂಘದ ರಘು ವದ್ದಿ ನೇತೃತ್ವದಲ್ಲಿ ಅಭಿಮಾನಿಗಳಿಗೆ ಸಾವಜಿ ಮಟನ್ ಊಟವನ್ನು ವಿತರಿಸುವದ ಮೂಲಕ ದಿ‌. ಪುನೀತ್ ರಾಜಕುಮಾರ ಅವರನ್ನು ಸ್ಮರಿಸಿದರು.

ನಿನ್ನೆ (ಮಾ.20) ನಗರದ ಅಪ್ಸರಾ ಚಿತ್ರಮಂದಿರ ಬಳಿ ಸಾವಜಿ ಮಟನ್ ಊಟವನ್ನು ವಿತರಿಸುವ ಮೂಲಕ ದಿ. ಪುನೀತ್ ರಾಜಕುಮಾರ್ ಅವರ ಹೆಸರು ಯಾವಾಗಲೂ ಅಜರಾಮರವಾಗಿರಲಿ ಎಂದು ಪ್ರಾರ್ಥಿಸಿದರು.

ರಾಘವೇಂದ್ರ ವದ್ದಿಯವರ ನೇತೃತ್ವದಲ್ಲಿ ಪುನೀತ್ ನಟನೆಯ ಜೇಮ್ಸ್ ಚಿತ್ರದ ಪೋಸ್ಟರ್ ನ ಮುಂದೆ ಸಾವಜಿ ಮಟನ್ ಊಟದ ನೈವೇದ್ಯ ಮಾಡಿ, ಬಳಿಕ ಚಿತ್ರ ವೀಕ್ಷಣೆ ಮಾಡಿ ಬಂದ ಅಪ್ಪು ಅಭಿಮಾನಿಗಳಿಗೆ ಊಟ ವಿತರಣೆ ಮಾಡಿದರು.

ಪುನೀತ್ ರಾಜಕುಮಾರ ಅವರ ಹುಟ್ಟು ಹಬ್ಬ ಹಾಗೂ ಜೇಮ್ಸ್ ಚಿತ್ರ ನೂರು ದಿನ‌ ಪೂರೈಸಲಿ ಎಂಬ ಉದ್ದೇಶದಿಂದ ಜೈ ರಾಜವಂಶ‌ ಅಭಿಮಾನಿ ಬಳಗ ಸದಸ್ಯರು, ಪುನೀತ ರಾಜಕುಮಾರ್ ಅವರಿಗೆ ಇಷ್ಟವಾದ ಸಾವಜಿ ಊಟವನ್ನು ಒಂದು ದಿನ ಪೂರ್ತಿಯಾಗಿ ಅಭಿಮಾನಿಗಳಿ ವಿತರಣೆ ಮಾಡುವ ಮೂಲಕ  ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ. ‌

Spread the love

Related Articles

Leave a Reply

Your email address will not be published. Required fields are marked *

Back to top button