ಕಣವಿ ಆರೋಗ್ಯ ಸ್ಥಿತಿ ಗಂಭೀರ, ಆರೋಗ್ಯ ಸುಧಾರಣೆಗೆ ವೈದ್ಯರು ಪ್ರಯತ್ನಿಸುತ್ತಿದ್ದಾರೆ: ಜೋಶಿ

ಹುಬ್ಬಳಿ: ಆನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಾಡೋಜ ಚೆನ್ನವೀರ ಕಣವಿಯವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭಿರವಾಗಿದ್ದು ಆರೋಗ್ಯ ಸುಧಾರಣೆಗೆ ವೈದ್ಯರು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಗರದ ಸತ್ತೂರು ಬಳಿಯ ಎಸ್ಡಿಎಂ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸದ್ಯ ಈಗ ನಾಡೋಜ ಚೆನ್ನವೀರ ಕಣವಿಯವರ ಆರೋಗ್ಯ ಚಿಕಿತ್ಸೆ ಮುಂದುವರೆದಿದೆ. ಅವರ ವಯಸ್ಸಿನ ಕಾರಣದಿಂದಾಗಿ ವೈದ್ಯರು ನೀಡುವ ಚಿಕಿತ್ಸೆಗೆ ದೇಹದ ಸ್ಪಂದನೆ ಸಿಗುವುದು ಕಷ್ಟವಾಗುತ್ತಿದೆ. ಅದಾಗ್ಯೂ ಕೂಡಾ ಡಾ.ನಿರಂಜನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಣವಿ ಅವರ ಆರೋಗ್ಯ ಸುಧಾರಣೆಗೆ ವೈದ್ಯರು ಪ್ರಯತ್ನಿಸುತ್ತಿದ್ದಾರೆ. ಆದಷ್ಟು ಬೇಗ ಅವರ ಅರೋಗ್ಯ ಸುಧಾರಣೆಯಾಗಿ ಮನೆಗೆ ಮರಳಲಿ ಎಂಬುದು ನಮ್ಮೆಲ್ಲರ ಆಶಯ ಎಂದರು.
ರಾಷ್ಟ್ರ ಕವಿ ಘೋಷಣೆಗೆ ನನ್ನ ಸಹಮತವಿದೆ.
ರಾಜ್ಯ ಸರ್ಕಾರದಿಂದ ನಾಡೋಜ ಚನ್ನವೀರ ಕಣವಿಯವರನ್ನ ರಾಷ್ಟ್ರ ಕವಿಯಾಗಿ ಘೋಷಣೆ ಮಾಡುವ ಶಿಫಾರಸ್ಸು ಮಾಡಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಹಾಗೇ ಮಾಡಿದೆ ಆದಲ್ಲಿ ಅದಕ್ಕೆ ನಮ್ಮ ಸಹಮತವಿದೆ. ಈ ಕುರಿತು ನಾನು ಕೂಡಾ ಪ್ರಯತ್ನ ಮಾಡುತ್ತೇನೆ. ಕಣವಿ ಅವರು ರಾಷ್ಟ್ರಕವಿಯಾಗಿ ಘೋಷಣೆ ಮಾಡಲು ಯೋಗ್ಯವಾದ ವ್ಯಕ್ತಿಯಾಗಿದ್ದಾರೆ. ಇದರ ಕುರಿತು ನಾನು ಕೂಡಾ ಪ್ರಯತ್ನಿಸುತ್ತೇನೆ ಎಂದರು.




