ಕಲಬುರ್ಗಿಜಿಲ್ಲಾ ಸುದ್ದಿ

ಬಡ ಮಕ್ಕಳಿಗೆ ನೀಡುವ ಅಕ್ಕಿಯಲ್ಲಿ ಪ್ಲ್ಯಾಸ್ಟಿಕ್ ಅಕ್ಕಿ ಕಲಬೆರಕೆ : ವಾಡಿ ಪಟ್ಟಣದಲ್ಲಿ ಜನರ ಆಕ್ರೋಶ

ಕಲಬುರ್ಗಿ: ಬಡ ಮಕ್ಕಳು ಹಸಿವಿನಿಂದ ಬಳಲುವವರನ್ನು ತಪ್ಪಿಸಲು ಅಂಗನವಾಡಿಯಲ್ಲಿ ಊಚಿತವಾಗಿ ನೀಡುವ ಅಕ್ಕಿಯಲ್ಲಿಯೂ ಕಲಬೆರಕೆ ಮಾಡಲಾಗುತ್ತಿದೆ. ಅಕ್ಕಿಯಲ್ಲಿ ಪ್ಲ್ಯಾಸ್ಟಿಕ್ ಅಕ್ಕಿ ಕಲಬೆರಕೆ ಮಾಡಿ ಸರಬರಾಜು ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಕಲಬುರ್ಗಿ ಜಿಲ್ಲೆಯ ವಾಡಿ ಪಟ್ಟಣದ ಬಹುತೇಖ ಅಂಗನವಾಡಿಗಳಲ್ಲಿ ನೀಡುತ್ತಿರುವ ಅಕ್ಕಿಯಲ್ಲಿ ಕಲಬೆರಕೆ ಇದೆ. ಪ್ಲ್ಯಾಸ್ಟಿಕ್ ಅಕ್ಕಿ ಸೇರಿಸಿ ಬಡ ಮಕ್ಕಳ ಜೀವದೊಂದಿಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ವಾಡಿ ಪುರಸಭೆ ವ್ಯಾಪ್ತಿಯ ವಾರ್ಡ್ 6ರ ಜಾಂಬವೀರ ಕಾಲೋನಿಯ ಅಂಗನವಾಡಿ ಕೇಂದ್ರದ ದಲಿತ ಕುಟುಂಬಗಳ ಮನೆಯಲ್ಲಿ ಅನ್ನ ಬೇಯಿಸುವಾ ಪ್ಲಾಸ್ಟಿಕ್ ಅಕ್ಕಿಗಳು ಇರೋದು ಪೋಷಕರ ಗಮನಕ್ಕೆ ಬಂದಿದ್ದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಕೂಡಲೇ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವಂತೆ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button