ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಸಭೆಗೆ ವಚನಾನಂದ ಶ್ರೀ ಭಾಗಿ: ಸ್ವಾಮೀಜಿ ನಡೆ ಕುತೂಹಲ

ಬಾಗಲಕೋಟೆ: ಬಾಗಲಕೋಟೆ ಖಾಸಗಿ ಹೋಟೆಲ್ ವೊಂದರಲ್ಲಿ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಸಭೆ ನಡೆಯುತ್ತಿದ್ದು. ಸಭೆಗೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಭಾಗಿಯಾಗಿ ಕುತೂಹಲ ಮೂಡಿಸಿದ್ದಾರೆ.
ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆಯಾಗಲಿದ್ಯಾ ಎನ್ನುವ ಚರ್ಚೆ ಮಧ್ಯೆಯೇ ಹರಹರಿ ಪೀಠದ ವಚನಾನಂದ ಸ್ವಾಮೀಜಿ ಸಭೆಗೆ ಹಾಜರಿಯಾಗಿ ಪರೋಕ್ಷವಾಗಿ ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಟಾಂಗ್ ನೀಡಿದ್ದಾರೆ ಎನ್ನಲಾಗುತ್ತಿದೆ. ಇದುವರೆಗೂ ನಡೆದ ಒಕ್ಕೂಟದ ಸಭೆಗೆ ಪಂಚಮಸಾಲಿ ಹರಿಹರ ಹಾಗೂ ಕೂಡಲಸಂಗಮ ಪೀಠದ ಇಬ್ಬರು ಸ್ವಾಮೀಜಿಗಳು ಭಾಗಿಯಾಗಿರಲಿಲ್ಲ. ಆದರೆ ಎರಡು ಪೀಠದಿಂದ ಸಮಾಜದ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂದು ಹೇಳಿ 70ಕ್ಕೂ ಹೆಚ್ಚು ಪಂಚಮಸಾಲಿ ಸ್ವಾಮೀಜಿ ಸೇರಿ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟ ರಚಿಸಿಕೊಂಡಿದ್ದರು.
ಇದೀಗ ಬಾಗಲಕೋಟೆಯಲ್ಲಿ ನಡೆದ ಪಂಚಮಸಾಲಿ ಒಕ್ಕೂಟದ ಸ್ವಾಮೀಜಿಗಳ ಸಭೆಗೆ ದಿಢೀರನೆ ವಚನಾನಂದ ಸ್ವಾಮೀಜಿ ಎಂಟ್ರಿ ಕೊಟ್ಟಿದ್ದು. ಹಲವು ಕುತೂಹಲಯುಂಟು ಮಾಡಿದೆ.ಸಭೆಗೆ ಭಾಗಿ ಹಿಂದಿರುವ ರಹಸ್ಯವೇನು? ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಸದಸ್ಯರಾಗ್ತಾರಾ ಇಲ್ಲವೇ ಒಕ್ಕೂಟದ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆಯೇ ಇಲ್ಲವೇ ಹರಿಹರದಲ್ಲಿ ನಡೆಯಲಿರುವ ಹರ ಜಾತ್ರೆಗೆ ಪಂಚಮಸಾಲಿ ಒಕ್ಕೂಟದ ಸ್ವಾಮೀಜಿಗಳಿಗೆ ಆಹ್ವಾನ ನೀಡುತ್ತಾರೆ ಎಂಬ ಕುತೂಹಲ ಮೂಡಿಸಿದೆ.
ಖಾಸಗಿ ಹೊಟೆಲ್ ನಲ್ಲಿ ನಡೆದ ಸಭೆಯಲ್ಲಿ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಅಧ್ಯಕ್ಷ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಒಕ್ಕೂಟದ ಕಾರ್ಯದರ್ಶಿ ಮನಗೂಳಿ ಹಿರೇಮಠದ ಸಂಗನಬಸವ ಸ್ವಾಮೀಜಿ ಸೇರಿದಂತೆ ಹದಿನೈದಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗಿಯಾಗಿದ್ದಾರೆ. ಹದಿನೈದಕ್ಕೂ ಹೆಚ್ಚು ಜನ ಪಂಚಮಸಾಲಿ ಸಮುದಾಯದ ಪ್ರಮುಖ ಮುಖಂಡರು ಭಾಗಿಯಾಗಿದ್ದು ಸಭೆಯ ಬಳಿಕ ವಚನಾನಂದ ಸ್ವಾಮೀಜಿಗಳು ತಮ್ಮ ಗುಟ್ಟು ಬಿಟ್ಟು ಕೊಡಲಿದ್ದಾರೆ ಎನ್ನುವ ಮಾಹಿತಿ ಇದೆ




