ತಮ್ಮ ಮತ್ತು ನಟ ಪುನೀತ್ ನಡುವಿನ ಬಾಂಧವ್ಯ ಸ್ಮರಿಸಿಕೊಂಡ ನಿಖಿಲ್ ಕುಮಾರಸ್ವಾಮಿ

ರಾಮನಗರ: ತಮ್ಮ ಮೊದಲ ಚಿತ್ರ ಜಾಗ್ವಾರ್ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿದ್ದ ವೇಳೆ ಚಿತ್ರರಂಗದ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಆದರೆ ಕಾರಣಾಂತರಗಳಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದ ಪುನೀತ್ ರವರು ಹೂಗುಚ್ಛ ಕಳುಹಿಸಿ ಶುಭ ಕೋರಿದ್ದರು.
ಅಲ್ಲದೇ ಇತ್ತೀಚಿನ ದಿನಗಳಲ್ಲಿ ರಾಘಣ್ಣ ಹಾಗೂ ಅಪ್ಪು ಕುಟುಂಬದ ಜತೆ ತಮ್ಮ ಒಡನಾಟ ಬೆಳೆದಿತ್ತು. ಅಲ್ಲದೆ ಅವರ ಮನೆಗೆ ಊಟಕ್ಕಾಗಿ ಕರೆದ್ದ ಸಂದರ್ಭದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಸಮಯ ಕಳೆಯುವ ಜತೆಗೆ ಮುಂಬರುವ ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಮಗೆ ಯಾವ ರೀತಿಯ ಪಾತ್ರಗಳು ಸೂಟ್ ಆಗುತ್ತವೆ ಎಂಬುದರ ಬಗ್ಗೆ ಮಾರ್ಗದರ್ಶನ ನೀಡಿದ್ದರು.
ದೊಡ್ಡಮನೆಯವರ ಒಳ್ಳೆಯ ನಡವಳಿಕೆ ಇಡೀ ಜಗತ್ತಿಗೆ ಗೊತ್ತು. ಮೊನ್ನೆ ಅರಮನೆ ಮೈದಾನದಲ್ಲಿ ನಡೆದ ಊಟದ ವ್ಯವಸ್ಥೆಯನ್ನು ಇಲ್ಲಿವರೆಗೆ ದೇಶದಲ್ಲಿ ಯಾರೂ ಕೂಡ ಅಂತಹ ಕಾರ್ಯಕ್ರಮವನ್ನು ಮಾಡಲು ಸಾಧ್ಯವಾಗುವುದಿಲ್ಲ. ದೊಡ್ಡಗುಣ ಇರುವ ಕುಟುಂಬಕ್ಕೆ ಇಂತಹ ಆಘಾತ ಆಗಬಾರದಿತ್ತು. ಎರಡೂವರೆ ತಿಂಗಳ ಹಿಂದೆ ನನ್ನನ್ನು ಪ್ರೀತಿಯಿಂದ ಕಂಡಿದ್ದ ಪುನೀತ್ ಇಂದು ನಮ್ಮೊಂದಿಗೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಭಾವುಕರಾದರು.
ಒಟ್ಟಾರೆ ಅಭಿಮಾನಿ ದೇವರುಗಳ ಆರಾಧ್ಯದೈವ ಪವರ್ ಸ್ಟಾರ್ ಪುನೀತ್ ನಮ್ಮನ್ನಗಲಿ ಎರಡು ವಾರಗಳೇ ಕಳೆದರು ಅಭಿಮಾನಿಗಳಿಗೆ ಅವರ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಕ್ತದಾನ, ನೇತ್ರದಾನ, ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ತಮ್ಮ ನೆಚ್ಚನ ನಟನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದರೆ ಯುವರಾಜನ ನೆನೆದ ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರು ಭಾವುಕರಾಗಿ ಪುಷ್ಪನಮನ ಸಲ್ಲಿಸಿದರು.




