ಮೈಸೂರು
ತರಕಾರಿ ಮಾರುತ್ತ ಕಷ್ಟದಲ್ಲಿದ್ದ ವಿದ್ಯಾರ್ಥಿನಿಗೆ ಲ್ಯಾಪ್‌ಟಾಪ್ ನೀಡಿದ ಸುಜೀವ್ ಸಂಸ್ಥೆ

ಮೈಸೂರು: ಆನ್ಲೈನ್ ಕ್ಲಾಸ್ಗೆ ಹಾಜರಾಗಲು ಮೊಬೈಲ್ ಇಲ್ಲದ ಕಾರಣ, ತಂದೆ ತಾಯಿಯೊಂದಿಗೆ ತರಕಾರಿ ಮಾರಲು ತೊಡಗಿದ್ದ ವಿದ್ಯಾರ್ಥಿನಿ ಕೀರ್ತನಾಗೆ ಸುಜೀವ್ ಸಂಸ್ಥೆ ಲ್ಯಾಪ್‌ಟಾಪ್ ನೀಡಿದೆ.
ಟ್ಯಾಬ್ ಕೊಂಡುಕೊಳ್ಳಲು ಕಷ್ಟಪಡುತ್ತಿದ್ದ ಮೈಸೂರಿನ ಸಾತಗಳ್ಳಿಯ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿನಿ ಕೀರ್ತನಾಗೆ ಸುಜೀವ್ ಸಂಸ್ಥೆ ಲ್ಯಾಪ್‌ಟಾಪ್ ನೀಡಿದೆ. ಮಾಧ್ಯಮದಲ್ಲಿ ವರದಿ ಗಮನಿಸಿದ ಬಳಿಕ, ಖುದ್ದು ಕೀರ್ತನಾ ನಿವಾಸಕ್ಕೆ ಭೇಟಿ ನೀಡಿ, ಲ್ಯಾಪ್‌ಟಾಪ್ ಕೊಡುಗೆ ಕೊಟ್ಟಿದೆ.
ಆಕೆಯ ವಿದ್ಯಾಭ್ಯಾಸಕ್ಕೂ ನೆರವಾಗಲಿದ್ದೇವೆ ಎಂಬ ಭರವಸೆಯನ್ನೂ ಸಂಸ್ಥೆ ನೀಡಿದೆ. ಈ ವೇಳೆ ಎನ್.ಆರ್.ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ತನ್ವೀರ್ ಸೇಠ್ ಅವರಿಗೂ ವಿದ್ಯಾರ್ಥಿಯನ್ನು ಭೇಟಿ ಮಾಡಿಸಿ ಸರ್ಕಾರದಿಂದ ಕೊಡಬೇಕಾದ ಸೌಲಭ್ಯದ ಬಗ್ಗೆ ವಿನಂತಿಸಲಾಯಿತು.




