ಮೈಸೂರು
ಎಎಸ್‌ಐ ಪುತ್ರ ನಾಲೆಯಲ್ಲಿ ಶವವಾಗಿ ಪತ್ತೆ

ಮೈಸೂರು: ವಾಯುವಿಹಾರಕ್ಕೆ ತೆರಳಿದ್ದ ನಗರ ಸಶಸ್ತ್ರ ಮೀಸಲು ಪಡೆಯ ಎಎಸ್‌ಐ ಮಹಾದೇವಸ್ವಾಮಿ ಅವರ ಪುತ್ರ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಪೊಲೀಸ್ ಬಡಾವಣೆ ಮೂರನೇ ಹಂತದ ನಿವಾಸಿ ಮಹಾದೇವಸ್ವಾಮಿ ಅವರ ಮಗ ಮನೋಜ್ (17) ಮೃತಪಟ್ಟಿದ್ದಾನೆ. ಶುಕ್ರವಾರ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ. ಬಡಾವಣೆಯ ಹಿಂಬದಿ ಇರುವ ನಾಲೆಯಲ್ಲಿ ಕಾಲು ಜಾರಿ ಬಿದ್ದಿದ್ದು, ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿ ಮನೋಜ್ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




