Latestಜಿಲ್ಲಾ ಸುದ್ದಿಮೈಸೂರುರಾಜಕೀಯ

ರಮೇಶ್ ಕುಮಾರ್ ಏನು ಎಂಬುದು ಸಾಬೀತಾಗಿದೆ: ಎಂಎಲ್ಸಿ ಹೆಚ್. ವಿಶ್ವನಾಥ್

ಮೈಸೂರು ; ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎಂತಹ ಮನುಷ್ಯ ಎಂಬುವುದು ರಾಜ್ಯದ ಜನರ ಮುಂದೆ ಸಾಬೀತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್‌. ವಿಶ್ವನಾಥ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ರಮೇಶ್ ಕುಮಾರ್ ಸ್ಪೀಕರ್ ಆಗಿದ್ದವರು, ಯಾವ ವಿಚಾರ ಹೇಗೆ ಮಾತನಾಡಬೇಕೆಂದು ಅರಿಯಬೇಕಿತ್ತು. ತಾನೇ ಮಹಾನ್ ಬುದ್ಧಿವಂತ, ನಾನೇ ಪಂಡಿತ ಎಂದು ಬಿಂಬಿಸಿಕೊಳ್ಳುವ ರಮೇಶ್ ಕುಮಾರ್ ಈಗ ಎಂತಹ ಮನುಷ್ಯ ಎಂಬುದು ರಾಜ್ಯದ ಜನರ ಮುಂದೆ ಸಾಬೀತಾಗಿದೆ ಎಂದು ವ್ಯಂಗ್ಯವಾಡಿದರು.

ಅವರ ಎಲ್ಲಾ ಕಥೆಗಳು ಎಲ್ಲರಿಗೂ ಗೊತ್ತು. ನಾನು ಆ ಕಥೆ ಹೇಳಿದರೆ, ನನ್ನನ್ನು ಹುಚ್ಚ ಅಂತಾ ಹೇಳುತ್ತಾರೆ. ಅವರ ಸಭ್ಯಸ್ತಿಕೆ ನಿನ್ನೆ ಸದನದಲ್ಲಿ ಗೊತ್ತಾಗಿದೆ ಎಂದರು. ಸಚಿವ ಮುನಿರತ್ನ ಮೈಸೂರು ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಸೋತ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕೆಲ ಬಿಜೆಪಿ ನಾಯಕರೇ ಅಮಾಯಕ ರಘು ಅವರನ್ನು ಬಲಿ ಕೊಟ್ಟರು. ಬಿಜೆಪಿಯ ಅಭ್ಯರ್ಥಿ ಸೋಲಿಗೆ ಬಿಜೆಪಿಯ ಕೆಲ ನಾಯಕರೇ ಕಾರಣ ಎಂದರು‌. ಮೈಸೂರು ಭಾಗದಲ್ಲಿ ಬಿಜೆಪಿ‌ಯ ಕೆಲ ನಾಯಕರು ಜೆಡಿಎಸ್ ಏಜೆಂಟರ್‌ಗಳಾಗಿದ್ದಾರೆ.

ಜೆಡಿಎಸ್‌ ಏಜೆಂಟರ್​​ಗಳಾಗಿ ಬಿಜೆಪಿಗೆ ಒಳ ಏಟು ಹೊಡೆಯುತ್ತಿದ್ದಾರೆ. ಅಂತಹ ನಾಯಕರ ಹೆಸರುಗಳು ಆದಷ್ಟು ಬೇಗ ಹೊರಗೆ ಬರುತ್ತವೆ. ಇವರ ಒಳ ಏಟಿಗೆ ಬಿಜೆಪಿ ಅಭ್ಯರ್ಥಿ ಬಲಿಯಾದರು ಎಂದು ಹೇಳಿದರು. ಕೊಟ್ಟ ದುಡ್ಡು ಸಮರ್ಪಕವಾಗಿ ತಲುಪಲಿಲ್ಲ. ಕೆಲವರು ಜೆಡಿಎಸ್ ಪರವಾಗಿ ಕೆಲಸ ಮಾಡಿದರು ಎಂದು ವಿಶ್ವನಾಥ್ ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button