Breaking Newsಚಿಕ್ಕಮಗಳೂರುಜಿಲ್ಲಾ ಸುದ್ದಿರಾಜಕೀಯ
ಇಂದಿರಾಗಾಂಧಿಯನ್ನು ಟೀಕಿಸುವ ಮಟ್ಟಕ್ಕೆ ಸಿ.ಟಿ ರವಿ ಬೆಳೆದಿಲ್ಲ: ಶಾಸಕ ಟಿ.ಡಿ ರಾಜೇಗೌಡ

ಚಿಕ್ಕಮಗಳೂರು: ಶಾಸಕ ಸಿ.ಟಿ ರವಿ ಇನ್ನೂ ಎತ್ತರಕ್ಕೆ ಬೆಳೆಯಬೇಕಿದ್ದು, ಇಂದಿರಾ ಗಾಂಧಿಯವರನ್ನು ಟೀಕಿಸುವ ಮಟ್ಟಕ್ಕೆ ಅವರು ಬೆಳೆದಿಲ್ಲ. ಬಾಲಿಶ ಹೇಳಿಕೆಗಳನ್ನು ನೀಡುವುದು ಈಗಲೇ ನಿಲ್ಲಿಸಲಿ. ಇಂತಹ ಸಣ್ಣತನದ ಹೇಳಿಕೆಗಳು ಅವರಿಗೆ ಶೋಭೆ ತರುವುದಿಲ್ಲ ಎಂದು ಶಾಸಕ ಟಿ.ಡಿ ರಾಜೇಗೌಡ ಸಿ ಟಿ ರವಿಗೆ ಚಾಟಿ ಬೀಸಿದರು.
ನೆಹರು ಹೆಸರಲ್ಲಿ ಹುಕ್ಕಾ ಬಾರ್ ತೆರೆಯಲಿ ಎಂಬ ಸಿ.ಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಸಿ ಟಿ ರವಿ ಅವರಿಗೆ ಇತಿಹಾಸದ ಜ್ಞಾನವಿಲ್ಲ. ದೇಶಕ್ಕೆ ನೆಹರು, ಇಂದಿರಾಗಾಂಧಿಯ ಕೊಡುಗೆ ಅಪಾರವಾದದ್ದು ಇತಿಹಾಸ ಗೊತ್ತಿದ್ದವರು ಈ ರೀತಿ ಮಾತಾಡಲಾರರು ಎಂದು ಹರಿಹಾಯ್ದರು.
