ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಹುಟ್ಟು ಹಬ್ಬದಂದೇ ನೇತ್ರದಾನಕ್ಕೆ ನೋಂದಣಿ: ಶಾಸಕ ಅಮೃತ ದೇಸಾಯಿ ನಿರ್ಧಾರಕ್ಕೆ ಪತ್ನಿ ಸಾಥ್

ಧಾರವಾಡ: ನಟ ಪುನೀತ್ ರಾಜಕುಮಾರ್ ಅವರ ನೇತ್ರದಾನದಿಂದ ಸ್ಪೂರ್ತಿ ಪಡೆದು, ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ನೇತ್ರದಾನಕ್ಕೆ ಮುಂದಾಗಿದ್ದಾರೆ. ಅದೇ ರೀತಿ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರು ಈಗ ತಮ್ಮ ಹಾಗೂ ಧರ್ಮಪತ್ನಿ ಅವರೊಂದಿಗೆ ನೇತ್ರದಾನಕ್ಕೆ ನಿರ್ಧಾರ ಮಾಡುವ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ.

ಈ ಕುರಿತು ಧಾರವಾಡ ಗ್ರಾಮೀಣ‌ ಅಮೃತ ದೇಸಾಯಿ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಈಗಾಗಲೇ ಸ್ಯಾಂಡಲ್​​​​ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರು ಅವರು ತಮ್ಮ ಮರಣದ ನಂತರ ಎರಡು ಕಣ್ಣನ್ನು ದಾನ ಮಾಡುವ ಮೂಲಕ ನಾಲ್ಕಕ್ಕೂ ಹೆಚ್ಚು ಅಂಧ ಜನರಿಗೆ ಜನರ ಬಾಳಿಗೆ ಬೆಳಕಾಗಿದ್ದಾರೆ. ಹಾಗಾಗಿ ಅವರ ಈ ಒಳ್ಳೆಯ ನಿರ್ಧಾರದಿಂದ ನಮ್ಮಗೂ ಕೂಡಾ ಸ್ಪೂರ್ತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ನಾನು ಹಾಗೂ ನಮ್ಮ ಧರ್ಮಪತ್ನಿ ಪ್ರೀಯಾ ಅಮೃತ ದೇಸಾಯಿ ಅವರು ಜೊತೆಗೂಡಿ ಇಂದು ನಮ್ಮ ಹುಟ್ಟು ಹಬ್ಬದಿನದ ಅಂಗವಾಗಿ ನರೇಂದ್ರ ಗ್ರಾಮದಲ್ಲಿ ಏರ್ಪಡಿಸಲಾದ ನೇತ್ರದಾನ ನೋಂದಣಿ ಕಾರ್ಯಕ್ರಮದಲ್ಲಿ ನೇತ್ರದಾನ ನೋಂದಣಿಗೆ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರತಿಯೊಬ್ಬರು ನೇತ್ರದಾನ ಮಾಡಬೇಕು ಇದರಿಂದ ನಮ್ಮ ನಡುವೆ ಇರುವ ಅಂದರ ಬಾಳು ಬೆಳಕಾಗುತ್ತದೆ. ಮರಣದ ನಂತರ ಮಣ್ಣು ಸೇರುವ ನಮ್ಮ ಅಮೂಲ್ಯ ನೇತ್ರಗಳನ್ನು ಯಾರು ಕೂಡಾ ಹಾಳು ಮಾಡಿಕೊಳ್ಳಬಾರದು. ದೇವರು ನಮಗೆ ಮತ್ತೊಬ್ಬರ ಜೀವನಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಹಲವು ಅಂಗಗಳನ್ನು ನಮ್ಮ ನಿಮ್ಮೆಲ್ಲರ ದೇಹಗಳನ್ನು ನೀಡಿದ್ದಾನೆ. ಹಾಗಾಗಿ ಪ್ರತಿಯೊಬ್ಬರು ಹಾಗೂ ನಮ್ಮ ಅಭಿಮಾನಿಗಳು ಕೂಡಾ ನೇತ್ರದಾನ ಜೊತೆಗೆ ರಕ್ತದಾನ ಮಾಡಿ ಮತ್ತೊಬ್ಬರ ಬಾಳಿಗೆ ಬೆಳಕಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.‌

ಇನ್ನೂ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಇಂದು ಧಾರವಾಡದ ನರೇಂದ್ರ ಗ್ರಾಮದಲ್ಲಿ ಅಮೃತ ಅಭಿಮಾನಿಗಳ ಬಳಗದಿಂದ ರಕ್ತದಾನ ಹಾಗೂ ನೇತ್ರದಾನ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮತ್ತಷ್ಟು ಜನರು ಶಾಸಕರ ಮನವಿ ಮೇರೆಗೆ ಇಂದು ನೇತ್ರದಾನ ಹಾಗೂ ರಕ್ತದಾನ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಪುನೀತ್ ನಿಧನ ನಂತರ ಅವರ ನೇತ್ರದಾನವು ಹಲವರುಗೆ ಸ್ಪೂರ್ತಿಯಾಗಿದ್ದು, ಈಗ ರಾಜಕೀಯ ನಾಯಕರುಗಳನ್ನು ಸೆಳೆಯುತ್ತಿರುವುದು ವಿಶೇಷವಾಗಿದೆ.

Related Articles

Leave a Reply

Your email address will not be published. Required fields are marked *

Back to top button