ಜಿಲ್ಲೆಯಲ್ಲಿ ಕೊರೊನಾ ತಡೆಯಲು ಜನತೆ ಸಹಕಾರ ನೀಡಬೇಕು: ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಮನವಿ

ಧಾರವಾಡ : ನಗರದ ಎಸ್ಡಿಎಂ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಸೂಕ್ತ ಕ್ರಮ ಕೈಗೊಂಡಿದೆ. ಕೊರೊನಾ ವೈರಸ್ ತಡೆಗಟ್ಟವ ದೃಷ್ಟಿಯಿಂದ ಮೆಡಿಕಲ್ ಕಾಲೇಜಿನಲ್ಲಿ ಹೆಚ್ಚು ತಪಾಸಣೆ ಮಾಡಲಾಗುತ್ತಿದೆ. ಜೊತೆಗೆ ಜಿಲ್ಲೆಯ ಜನರು ಕೂಡಾ ವೈರಸ್ ತಡೆಗೆ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಮನವಿ ಮಾಡಿದರು.
ಧಾರವಾಡದ ಎಸ್ಡಿಎಂ ಮೆಡಿಕಲ್ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಮಾಹಿತಿ ಪಡಿದುಕೊಂಡ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಸ್ಡಿಎಂ ಕಾಲೇಜು ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ಸೋಂಕು ಇದೀಗ 306 ಕ್ಕೆ ಏರಿಕೆಯಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬೇಕಾದ ಅಗತ್ಯ ಕ್ರಮಗಳನ್ನ ತ್ವರಿತವಾಗಿ ಜಿಲ್ಲಾಡಳಿತ ಹಾಗೂ ಸರ್ಕಾರ ತೆಗೆದುಕೊಂಡಿದೆ. ಈಗಾಗಲೇ ಕೈಗೊಂಡಿದೆ. ಎಸ್ಡಿಎಂ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶವನ್ನು ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಅಷ್ಟೇ ಅಲ್ಲದೇ ಆಸ್ಪತ್ರೆಯ ಒಳಗಿರುವ ಜನ ಹಾಗೂ ಹೊರಗಿನ ಜನರು ಸಂಪರ್ಕ ಮಾಡದಂತೆ ಕಟ್ಟೆಚ್ಚರವಹಿಸಲಾಗಿದೆ ಎಂದರು.
ಅಂತರಾಜ್ಯ ಎಸ್ಡಿಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಂದ ವೈರಸ್ ಹರಡಿರುವ ಸಾಧ್ಯತೆ ಇದೆ:
ಎಸ್ಡಿಎಂ ನಿಷ್ಕಾಳಜಿಯಿಂದಾಗಿ ಈ ವೈರಸ್ ಹರಡಿರಬಹುದು ಎಂಬ ಮಾದ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದನ್ನ ನಿಷ್ಕಾಳಜಿ ಎಂದು ಹೇಳಲು ಬರುವುದಿಲ್ಲ. ಕೆಲವು ದಿನಗಳ ಹಿಂದೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಆ ಒಂದು ಕಾರ್ಯಕ್ರಮದಲ್ಲಿ ಇದೆ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಕೇರಳದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹೀಗಾಗಿ ಕೊರೊನಾ ಸೋಂಕು ಹರಡಿರುವ ಸಂಭವವಿದೆ. ಆದ್ದರಿಂದ ಜನರು ಕೊರೊನಾ ತಡೆಗಡ್ಟಲು ಬೇಕಾದ ಸಹಕಾರ ನೀಡಬೇಕು. ಅಷ್ಟೇ ಅಲ್ಲದೆ ಹೆಚ್ಚು ಜನ ಇರುವ ಕಡೆಗಳಲ್ಲಿ ಮಾಸ್ಕ ಹಾಕಿಕೊಂಡು ಕೊರೊನಾ ರೂಲ್ಸ್ ಪಾಲಿಸಬೇಕು, ಈ ಮೂಲಕ ಜನರು ಸಹ ಸರ್ಕಾರಕ್ಕೆ ಕೊರೊನಾ ತಡೆಗಟ್ಟಲು ಸಹಕರಿಸಬೇಕು ಎಂದರು ತಿಳಿಸಿದರು.




