ಜಿಲ್ಲಾ ಸುದ್ದಿ
ಮಂಗಳೂರು: ಬೃಹತ್ ಗಾಂಜಾ ಸಾಗಾಟ ಜಾಲ ಪತ್ತೆ

ಮಂಗಳೂರು: ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ಕಾಸರಗೋಡು ಹಾಗೂ ಮಂಗಳೂರು ಕಡೆಗೆ ಗಾಂಜಾ ಸಾಗಾಟ ಮಾಡಲಾಗುತ್ತಿದ್ದ ನಾಲ್ವರು ಅರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇವರ ಹಿಂದೆ ಹಲವಾರು ಡಕಾಯಿತಿ ಪ್ರಕರಣಗಳಿವೆ. ಆರೋಪಿಗಳಿಂದ 200 ಕೆಜಿ ಗಾಂಜಾ,ತಲ್ವಾರು,ಲಾರಿ ಮತ್ತು ಕಾರು ವಶಕ್ಕೆ ಪಡೆಯಲಾಗಿದೆ.
ಈ ಕೃತ್ಯದಲ್ಲಿ ಇನ್ನೂ ಕೆಲವರು ಇರಬಹುದು ಎಂಬ ಶಂಕೆ ಇದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




