ಮಂಡ್ಯ
ಮದ್ದೂರಿಗೆ ಬಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಮಂಡ್ಯ: ಬಿಜೆಪಿ ಜನಾದೇಶ ಯಾತ್ರೆ ದೇಶಾದ್ಯಂತ ಇಂದಿನಿಂದ ಆರಂಭವಾಗಿದೆ. ಹೊಸದಾಗಿ ಕೇಂದ್ರ ಸಚಿವೆಯಾಗಿರುವ ಶೋಬಾ ಕರಂದ್ಲಾಜೆ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ್ದು, ಮಂಡ್ಯದ ಮದ್ದೂರಿನಲ್ಲಿ ನಿಡಘಟ್ಟ ನ್ಯಾಯಬೆಲೆ ಅಂಗಡಿಗೆ ಭೇಟಿ ಕೊಟ್ಟಿದ್ದಾರೆ.
ನ್ಯಾಯಬೆಲೆ ಅಂಗಡಿಯಲ್ಲಿ ಅವರು ಅಕ್ಕಿಯ ಗುಣಮಟ್ಟ ಪರಿಶೀಲಿಸಿದರು.
ಶೋಭಾ ಕರಂದ್ಲಾಜೆ ಅವರನ್ನು ಸಚಿವ ಕೆ.ಸಿ.ನಾರಾಯಣ್ ಗೌಡ ಸ್ವಾಗತಿಸಿದರು. ಬಿಜೆಪಿ ಕಾರ್ಯಕರ್ತರು ಶೋಭಾ ಕರಂದ್ಲಾಜೆಯವರನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಅವರ ಸ್ವಾಗತಕ್ಕಾಗಿ ಬೈಕ್ ರ್ಯಾಲಿ ನಡೆಯಿತು.




