Breaking Newsಜಿಲ್ಲಾ ಸುದ್ದಿಮಂಡ್ಯ

ಕಲ್ಲು ಕ್ವಾರಿ ಬಳಿ ಸ್ಫೋಟಕ ಪತ್ತೆ : ಸ್ಥಳೀಯರಲ್ಲಿ ಆತಂಕ

ಮಂಡ್ಯ : ಜಿಲ್ಲೆಯಲ್ಲಿ ಗಣಿಗಾರಿಕೆ ನಿಷೇಧವಿದ್ದರೂ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಕಲ್ಲು ಕ್ವಾರಿ ಬಳಿ ಸ್ಫೋಟಕಗಳು ಪತ್ತೆಯಾಗಿದ್ದು ಸ್ಥಳೀಯರು ಭಯಭೀತರಾಗಿದ್ದಾರೆ.

ನಿಷೇಧಿತ ಪ್ರದೇಶದಲ್ಲಿ 11 ಡಿಟೋನೇಟರ್, 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಕುರಿಗಾಹಿಗಳು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸಿದ್ಧಲಿಂಗೇಶ್ವರ ಕ್ರಷರ್ ಸಮೀಪ ಸ್ಫೋಟಕಗಳ‌ನ್ನು ವಶಪಡಿಸಿಕೊಂಡಿದ್ದಾರೆ.

ಮತ್ತೆ ಸ್ಫೋಟಕಗಳು ಪತ್ತೆಯಾಗಿರೋದ್ರಿಂದ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಈ ವ್ಯಾಪ್ತಿಯಲ್ಲಿ ಇನ್ನಷ್ಟು ಸ್ಫೋಟಕಗಳನ್ನು ಇರಿಸಿರಬಹುದು ಎಂಬ ಅನುಮಾನವೂ ಎಲ್ಲರಲ್ಲೂ ಮೂಡಿದೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Spread the love

Related Articles

Leave a Reply

Your email address will not be published. Required fields are marked *

Back to top button