ದತ್ತಾತ್ರೇಯ ದರ್ಶನಕ್ಕೆ ಮಹಾರಾಷ್ಟ್ರದ ಭಕ್ತವೃಂದ: ಕಲಬುರಗಿ ಜಿಲ್ಲೆಗೆ ಡೇಲ್ಟಾ ಪ್ಲಸ್ ಆತಂಕ

ಕಲಬುರಗಿ: ಅಮವಾಸ್ಯೆ ನಿಮಿತ್ಯ ಸುಕ್ಷೇತ್ರ ಗಾಣಗಾಪುರ ದತ್ತಾತ್ರೇಯನ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸುವ ಪರಿಣಾಮ ಡೆಲ್ಟಾ ಪ್ಲಸ್ ಸೋಂಕು ಹರಡುವ ಆತಂಕ ಶುರುವಾಗಿದೆ.
ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ಗುರು ದತ್ತಾತ್ರೇಯ ದೇವಸ್ಥಾನಕ್ಕೆ ಹೆಚ್ಚಾಗಿ ಮಹಾರಾಷ್ಟ್ರದ ಭಕ್ತರೆ ಬರುವದುಂಟು. ಇತ್ತಿಚಿಗಷ್ಟೆ ಅನ್ಲಾಕ್ 3.0 ಜಾರಿಯಾಗಿ ಜಿಲ್ಲೆಯ ದೇವಸ್ಥಾನಗಳು ದರ್ಶನಕ್ಕೆ ಅನುಮತಿ ನೀಡಲಾಗಿದೆ. ಅಲ್ಲದೆ ಮಹಾರಾಷ್ಟ್ರದಿಂದ ಬರುವವರಿಗೆ ಕೊರೊನಾ ಪಾಸಿಟಿವ್ ವರದಿ ಕಡ್ಡಾಯಗೊಳಿಸಿದರೂ ಅನ್ಯ ಮಾರ್ಗಗಳಿಂದ ಕರ್ನಾಟಕ ಪ್ರವೇಶ ಮಾಡುತ್ತಿದ್ದಾರೆ. ಇಂದು ಮಣ್ಣೆತ್ತಿನ ಅಮವಾಸ್ಯೆ ನಿಮ್ಮಿತ್ತ ಸಾವಿರಾರು ಭಕ್ತರು ಮಹಾರಾಷ್ಟ್ರದಿಂದ ಬಂದು ದರ್ಶನ ಪಡೆದರು.
ಸಾಮಾಜಿಕ ಅಂತರ ಇಲ್ಲದೆ ಹಲವರು ಮಾಸ್ಕ್ ಸಹ ಧರಿಸದೆ ಮೈ ಮರೆತು ಅಪಾಯಕ್ಕೆ ಅವ್ಹಾನ ಮಾಡುವದು ಕಂಡಬಂತು. ಮುಗಿಬಿದ್ದು ದರ್ಶನವನ್ನು ಭಕ್ತರು ಪಡೆದರು. ಮಹಾರಾಷ್ಟ್ರದಲ್ಲಿ ಸದ್ಯ ಡೆಲ್ಟಾ ಪ್ಲಸ್ ಆರ್ಭಟ ಜೋರಾಗಿದೆ. ಇದರ ಮಧ್ಯೆ ಗಾಣಗಾಪುರಕ್ಕೆ ಭಕ್ತರು ಬಂದಿದ್ದು, ರಾಜ್ಯದಲ್ಲಿಯೂ ಡೇಲ್ಟಾ ಆತಂಕ ಸುರುವಾಗಿದೆ.




