ಜಿಲ್ಲಾ ಸುದ್ದಿ

ಚಿಕ್ಕಮಗಳೂರು: ಮುಂದುವರಿದ ಲಾಕ್ಡೌನ್; ಸಾರ್ವಜನಿಕರ ಅಳಲು

ವರದಿ: ರಫೀಕ್

ಚಿಕ್ಕಮಗಳೂರು: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ- ಜಿಲ್ಲಾಡಳಿತ ಕೆಲವು ಕಠಿಣ ನಿಲುವು ತೆಗೆದುಕೊಳ್ಳಬೇಕು ನಿಜ…. ಸಾರ್ವಜನಿಕರು ಸಹಕರಿಸಬೇಕು ಆದರೆ ಅದು ಸಾಮಾನ್ಯ ಜನರ ಬದುಕನ್ನು ಕಿತ್ತುಕೊಳ್ಳುವಂತಾಗಬಾರದು. ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರ ಅಭಿಪ್ರಾಯವನ್ನು ಈ ಮೂಲಕ ಜಿಲ್ಲಾಡಳಿತಕ್ಕೆ ಜಿಲ್ಲಾ ಪತ್ರಕರ್ತರ ಸಂಘ ವ್ಯಕ್ತಪಡಿಸುತ್ತಿದೆ ಎಂದು ಅಧ್ಯಕ್ಷ ಜಿ ಎಂ ರಾಜಶೇಖರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಕರೋನ ಗಣನೀಯವಾಗಿ ಏರುತ್ತಿದೆ ರೋಗ ಹರಡುವಿಕೆ ಸರಪಳಿಯನ್ನು ತುಂಡರಿಸುವುದು ಅತ್ಯವಶ್ಯಕ.ಸಾಮಾನ್ಯ ಜನರ ಬದುಕನ್ನು ಅರ್ಥ ಮಾಡಿಕೊಳ್ಳಬೇಕು.ಗ್ರಾಮೀಣ ಭಾಗ ಹೆಚ್ಚು ಸೋಂಕಿರುವ ಪ್ರದೇಶದಲ್ಲಿ ಬೆಳಗ್ಗೆ 6ರಿಂದ10 ಗಂಟೆವರೆಗೆ ದಿನಸಿ ಖರೀದಿಗೆ ಅವಕಾಶ ನಗರ ಪ್ರದೇಶಗಳಲ್ಲಿ ನಗರ ಪ್ರದೇಶದಲ್ಲಿ 1ದಿವಸವಾದರೂ ಬೆಳಗ್ಗೆ ಅವಕಾಶ ಕೊಟ್ಟು ಲಾಕ್ ಡೌನ್ ಮಾಡಬಹುದಿತ್ತು ಆದರೆ 12 ದಿವಸವೂ ಅವಕಾಶವಿಲ್ಲ. ಸೂಪರ್ ಮಾರ್ಕೆಟ್ಟಿನ ಹೋಮ್ ಡಿಲಿವರಿ ಹತ್ತಿರದಿಂದ ಬಲ್ಲವರಿಗೆ ಗೊತ್ತು. ಸಾಮಾನ್ಯ ದಿನಸಿ ಅಂಗಡಿಗೂ, ಸೂಪರ್ ಮಾರ್ಕೆಟ್ ದರಗಳು ದುಬಾರಿ ಅದು ಸಾಮಾನ್ಯ ಜನರಿಗೆ ಕೈಗೆಟುಕುವುದಿಲ್ಲ.

ಈ ಬಾರಿ ಮಳೆಯಾಗಿದೆ ಮುಂಗಾರು ಸಮೀಪಿಸುತ್ತಿದೆ ಕೃಷಿ ಚಟುವಟಿಕೆಗಳಿಗೆ ಜಿಲ್ಲೆಯಾದ್ಯಂತ ರೈತರು,ಕೃಷಿ ಕಾರ್ಮಿಕರನ್ನು ಕರೆತರಬೇಕು. ಆದರೆ ಜಿಲ್ಲಾಡಳಿತ ಕೃಷಿ ಕಾರ್ಮಿಕರನ್ನು ಕರೆದುಕೊಂಡು ಹೋಗುವ ಹಾಗಿಲ್ಲ, ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಹೋಗುವ ಹಾಗಿಲ್ಲ ಎಂದು ಆದೇಶ ಮಾಡಿದೆ. ಕೃಷಿ ಚಟುವಟಿಕೆ ಮಾಡುವುದು ಹೇಗೆ ? ಕಳೆದ ಬಾರಿ ದಿನನಿತ್ಯ ಬೆಳಿಗ್ಗೆ ಹತ್ತು ಗಂಟೆ ಒಳಗೆ ಜಮೀನಿಗೆ ಹೋಗುವುದು ಸಂಜೆ 6ಗಂಟೆವರೆಗೆ ಕೃಷಿ ಚಟುವಟಿಕೆಗೆ ಮುಗಿಸಿ ವಾಪಸ್ಸು ಬರುವ ರೈತರಿಗೆ ಅವಕಾಶವಿತ್ತು. ಈ ಬಾರಿ ನಗರ ಪಟ್ಟಣ ಪ್ರದೇಶದಿಂದ ಕೃಷಿ ಜಮೀನಿಗೆ ಕಾರ್ಮಿಕರೂ ಸೇರಿದಂತೆ ರೈತರು ಹೋಗುವ ಹಾಗಿಲ್ಲ ಎಂಬ ಆದೇಶ ಎಷ್ಟು ಸರಿ? ಎಂದು ರೈತರು ಪ್ರಶ್ನಿಸಿದ್ದಾರೆ.

ಕೃಷಿ ಉಪಕರಣ ಹೋಮ್ ಡೆಲಿವರಿಗೆ ಅವಕಾಶವಿದೆ. ಆದರೆ ಹಣ ಎಲ್ಲಿಂದ ತರುವುದು? ಬ್ಯಾಂಕ್ ಇದ್ದರೂ ಬ್ಯಾಂಕ್ ಹೋಗುವ ಹಾಗಿಲ್ಲ ಎಟಿಎಂ ಹೋಗುವ ಹಾಗಿಲ್ಲ.ಅಂಗಡಿಯವನಿಗೆ ಹಣ ಕೊಡುವುದು ಎಲ್ಲಿಂದ? ಜಿಲ್ಲೆಯಲ್ಲಿ ಬಹುತೇಕ ಮಲೆನಾಡು ಬಯಲುಸೀಮೆಗಳಲ್ಲಿ ರೈತರು ತಾಲ್ಲೂಕು ಕೇಂದ್ರಗಳಲ್ಲಿ ವಾಸಿಸಿ ಜಮೀನುಗಳಿಗೆ ದಿನ ನಿತ್ಯ ಹೋಗಿ ಬರುತ್ತಾರೆ. ಆದರೆ ರೈತರು ಪಟ್ಟಣ ನಗರ ಪ್ರದೇಶದಿಂದ ಜಮಿನಿಗೆ ಹೋಗಲೇಬಾರದು ಎಂದರೆ ಕೃಷಿ ಚಟುವಟಿಕೆ ನಡೆಯುವುದಾದರೂ ಹೇಗೆ? ಎಂದು ಕೃಷಿಕರು ಪ್ರಶ್ನಿಸಿದ್ದಾರೆ. ಕಾಮಗಾರಿಗಳಿಗೆ ಸಂಬಂಧಿಸಿದಂತೆ ಉದಾಹರಣೆಗೆ ಚಿಕ್ಕಮಗಳೂರು ನಗರದಲ್ಲಿ ಯುಜಿಡಿ ರಸ್ತೆ ಕಾಮಗಾರಿ ನಡೆಯುತ್ತಿದೆ ಈ ಕಾಮಗಾರಿಗೆ ಹೊರಭಾಗದಿಂದ ಕಾರ್ಮಿಕರು ಬಂದು ಚಿಕ್ಕಮಗಳೂರು ನಗರದಲ್ಲಿ ನೆಲೆಸಿದ್ದಾರೆ.ಕಾಮಗಾರಿ ಏಕಾಏಕಿ ನಿಂತಿರುವುದರಿಂದ ಅವರ ಬದುಕು ಹಾಗೂ ಕಾಮಗಾರಿ ಸ್ಥಿತಿಯನು? ಮಳೆಗಾಲ ಆರಂಭವಾಗುತ್ತದೆ ಈ ಕಾಮಗಾರಿ ನೆನೆಗುದಿಗೆ ಬಿದ್ದರೆ ಸಾರ್ವಜನಿಕರು ಸಂಕಷ್ಟ ಎದುರಿಸಬೇಕಾಗುತ್ತದೆ.

ಈ ಕಾಮಗಾರಿಗೆ ಬಂದಿರುವ ಕಾರ್ಮಿಕರ ಕೊವಿಡಟೆಸ್ಟ್ ಮಾಡಿಸಿ ಕೆಲಸ ಮಾಡಿಸಬಹುದಿತ್ತು.ಗುತ್ತಿಗೆದಾರನ ಸ್ಥಿತಿಯೇನು? ಇಷ್ಟೆಲ್ಲಾ ಮಾಡುತ್ತಿರುವುದು ಸಾರ್ವಜನಿಕರಿಗಾಗಿ ಹಾಗಾಗಿ ಜಿಲ್ಲಾಡಳಿತ ಸಾರ್ವಜನಿಕರ ಅಭಿಪ್ರಾಯವನ್ನು ಪಡೆದು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.ಹಾಗೆಂದು ಸಾರ್ವಜನಿಕರು ಹೇಳಿದ್ದಲ್ಲ ಸರಿಯಲ್ಲ ಜಿಲ್ಲಾಡಳಿತ ಮಾಡಿದ್ದೆಲ್ಲವೂ ಸರಿಯಲ್ಲ.ಸಾಮಾನ್ಯ ಜನರ ಬದುಕನ್ನು ಗಮದಲ್ಲಿಟ್ಟುಕೊಂಡು ಆದೇಶ ಮಾಡಿದರೆ ಅನುಕೂಲವಾಗುತ್ತದೆ.ಇನ್ನಾದರೂ ಜಿಲ್ಲಾಡಳಿತ ಸಾಮಾನ್ಯ ಜನರ ಹಿತದೃಷ್ಟಿಯಿಂದ ಕೃಷಿ ಹಾಗೂ ದಿನಸಿ ಸಂಬಂಧಪಟ್ಟಂತೆ ಕೆಲವು ಬದಲಾವಣೆಯನ್ನು ಮಾಡಿಕೊಂಡರೆ ಸಾರ್ವಜನಿಕರು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button