ಜಿಲ್ಲಾ ಸುದ್ದಿ
ವಲಸೆ ಕಾರ್ಮಿಕನ ಮೇಲೆ ಬೆಳಗಾವಿ ಪೊಲೀಸ್ ಸಿಬ್ಬಂದಿ ದರ್ಪ

ನಿನ್ನೆ ಸಂಜೆ ಮಹಾರಾಷ್ಟ್ರ ರತ್ನಾಗಿರಿಯಿಂದ ಗುಲ್ಬರ್ಗ ತೆರಳುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಪೋಲಿಸರ ದರ್ಪ ತೋರಿ ಲಾಠಿ ಬೀಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ಚೆಕ್ ಪೋಸ್ಟ ನಲ್ಲಿ ಘಟನೆ ಜರುಗಿದ್ದು ಲಾಕ್ ಡೌನ್ ಬಂದೋಬಸ್ತ್ ಗೆ ಇದ್ದ ಪೊಲೀಸ್ ಸಿಬ್ಬಂದಿಯಿಂದಲೇ ವಲಸೆ ಕಾರ್ಮಿಕ ಏಟು ತಿಂದು ರಸ್ತೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.
ಒಂದು ಕಡೆ ಹಸಿವು ನೋವು ಸಂಕಟದೊಂದಿಗೆ ಕೆಲಸ ಆರಿಸಿ ಹೋಗುತ್ತಿರುವವರ ಮೇಲೆ ಪೊಲೀಸರ ಈ ರೀತಿ ದರ್ಪ ತೋರಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಹಿರಿಯ ಅಧಿಕಾರಿಗಳು ಈ ಬಗ್ಗೆ ಏನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.




