Latestಜಿಲ್ಲಾ ಸುದ್ದಿಮೈಸೂರು

ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದೇ ಆದಿವಾಸಿಗಳ ಪರದಾಟ

ಮೈಸೂರು ; ಕಾಡಿ‌ನಲ್ಲಿ ಶವಸಂಸ್ಕಾರಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವುದರಿಂದ ಹೆಣ ಹೂಳಲೂ ಜಾಗವಿಲ್ಲದೆ ಆದಿವಾಸಿಗಳು ಪರದಾಡುತ್ತಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಸರಗೂರು ತಾಲ್ಲೂಕಿನ ಬಿ.ಮಟಕರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲನಹಳ್ಳಿ ಹಾಡಿ ಜನರ ದುಸ್ಥಿತಿ ಹೇಳತೀರದ್ದಾಗಿದೆ. ಈ ಹಾಡಿಯಲ್ಲಿ ಸಂಸ್ಕಾರಕ್ಕೂ ಜಾಗ ಇಲ್ಲದಂತಾಗಿದ್ದು, ಆದಿವಾಸಿಗಳು ಕಾಡು ಹೆಣವಾಗುತ್ತಿದ್ದಾರೆ.

ಈ ಆದಿವಾಸಿಗಳ ಬದುಕು ಶೋಚನೀಯವಾಗಿದೆ. ಅದ್ರೆ ಯಾರಾದರೂ ಮೃತಪಟ್ಟರೆ ಮತ್ತಷ್ಟು ದುಸ್ಥಿತಿಗೆ ತಲುಪುವಂತಾಗಿದೆ. ಹಾಡಿ ಜನರು ಮೃತಪಟ್ಟರೆ ಹೂಳಲು ಇಲ್ಲ ಸ್ಮಶಾನ. ಕಾಡಿನಲ್ಲೆ ಶವಸಂಸ್ಕಾರ ಮಾಡಬೇಕಾದ ದುಸ್ಥಿತಿ ಎದುರಾಗಿದೆ.

ತಾಲೂಕು ಆಡಳಿತದ ಸ್ಮಶಾನ ಜಾಗ ನೀಡುವಂತೆ ಆದಿವಾಸಿಗಳ ಆಗ್ರಹಿಸಿದ್ದಾರೆ. ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಜಿಲ್ಲಾಡಳಿತ ಸ್ಪಂದಿಸಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button