ಜಿಲ್ಲಾ ಸುದ್ದಿಬಾಗಲಕೋಟೆ
ಬಾಗಲಕೋಟೆ: ಸಂಭ್ರಮದ ಕುಳುಗೇರಿ ಭಂಡಾರ ಜಾತ್ರೆ

ಬಾಗಲಕೋಟೆ: ಸಾವಿರಾರು ಭಕ್ತರ ಹರ್ಷೋದ್ಗಾರ ಮಧ್ಯೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳುಗೇರಿ ಗ್ರಾಮದ ಬೀರಲಿಂಗೇಶ್ವರ ಮಹಾ ರಥೋತ್ಸವ ಜರುಗಿತು. ಕುಳುಗೇರಿ ಗ್ರಾಮದ ಬೀರಲಿಂಗೇಶ್ವರ ಜಾತ್ರೆ ಭಂಡಾರದ ಜಾತ್ರೆ ಎಂದು ಪ್ರಸಿದ್ಧಿ ಪಡೆದಿದೆ.
ಭಕ್ತರು ಭಂಡಾರದಲ್ಲಿ ಮಿಂದೆದ್ದರು.ಕೋವಿಡ್ ದಿಂದಾಗಿ ಕಳೆದ ಎರಡು ವರ್ಷಗಳಿಂದ ಭಂಡಾರದ ಜಾತ್ರೆ ಕಳೆಗುಂದಿತ್ತು. ಕೋವಿಡ್ ಕಡಿಮೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾತ್ರೆಗೆ ಅನುಮತಿ ನೀಡಿದ್ದರಿಂದ ಸಂಭ್ರಮದಿಂದ ಭಂಡಾರ ಜಾತ್ರೆ ನಡೆಯಿತು.
ದೇಗುಲದ ಪ್ರಾಂಗಣದಲ್ಲಿ ಡೊಳ್ಳು ಕುಣಿತ ಗಮನಸೆಳೆಯಿತು. ಭಕ್ತರು ದೇಗುಲಕ್ಕೆ ಭಂಡಾರ ಎರಚಿ ಹರಕೆ ತೀರಿಸಿದರು.
ಇನ್ನು ಗೋಧೋಳಿ ಮುಹೂರ್ತದಲ್ಲಿ ನಡೆದ ಮಹಾರಥಕ್ಕೆ ಭಕ್ತರು ಉತ್ತತ್ತಿ,ಭಂಡಾರ ಸಮರ್ಪಿಸಿ ಭಕ್ತಿಭಾವ ಮೆರೆದರು. ಜಾತ್ರೆಗೆ ಕುಳಗೇರಿ ಹೋಬಳಿಯ 15ಕ್ಕೂ ಹೆಚ್ಚು ಗ್ರಾಮ ಹಾಗೂ ನೆರೆಯ ಗದಗ ಜಿಲ್ಲೆಯ ಭಕ್ತರು ಆಗಮಿಸಿದ್ದರು.




