Breaking Newsಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಸರ್ಕಾರದಲ್ಲಿನ ಕಚ್ಚಾಟ ಎರಡು ವರ್ಷಗಳಿಂದ ನಡೆಯುತ್ತಿದೆ: ಸತೀಶ್​ ಜಾರಕಿಹೊಳಿ

ಧಾರವಾಡ : ರಾಜ್ಯದಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡ ನಂತರದಿಂದ ಅಧಿಕಾರಕ್ಕಾಗಿ ಕಚ್ಚಾಟ ನಡೆಯುತ್ತಲ್ಲೇ ಬಂದಿದೆ. ಅವರ ಅಧಿಕಾರದ ಕಚ್ಚಾಟ ಹೊಸದಲ್ಲ. ಆದರೆ ಈಗ ಅದೂ ಬಿದಿಗೆ ಬಂದಿದೆ ಅಷ್ಟೇ ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ನಮ್ಮ ಮೈತ್ರಿ ಸರ್ಕಾರ ಬಿದ್ದ ಮೇಲೆ ಅಧಿಕಾರಕ್ಕೆ ಬಂತು. ಆದರೆ ಅಂದಿನಿಂದ ಆರಂಭವಾದ ಅಧಿಕಾರದ ಒಳ ಜಗಳ ನಡೆಯುತ್ತಲ್ಲೇ ಬರುತ್ತಿದೆ. ಜನರು ಬಿಜೆಪಿಯವರ ಎಲ್ಲ ಆಟವನ್ನು ನೋಡುತ್ತಿದ್ದಾರೆ ಎಂದರು.

ಪ್ರವಾಹ ಬಂದು ಬೆಳಗಾವಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಬಹಳ ಸಮಸ್ಯೆಯಾಗಿದೆ. ಈಗಾಗಲೇ ನಮ್ಮ ಸಿಎಲ್‌ಪಿ ನಾಯಕರು ಸಭೆ ಮಾಡಿದ್ದಾರೆ. ಹಾನಿಯಾದ ಪರಿಹಾರವನ್ನು ಫಲಾನುಭವಿಗಳಿಗೆ ಸರ್ಕಾರದಿಂದ ಕೊಡಿಸುವ ಪ್ರಯತ್ನ ಮಾಡ್ತೇವೆ. ಹಿಂದೆ ಕೂಡಾ ಪರಿಹಾರಕ್ಕೆ ನಮ್ಮ ಪಕ್ಷ ಸರ್ಕಾರಕ್ಕೆ ಆಗ್ರಹಿಸಿತ್ತು. ಆದರೆ ಅದರ ಪರಿಹಾರ ಕೂಡಾ‌ ಹಾನಿಯಾದ ಕುಟುಂಬಗಳಿಗೆ ಕೈಸೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎರಡು ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಫೈನಲ್‌ ಮಾಡಿಲ್ಲ:

ಸಿ ಎಂ ಉದಾಸಿ ನಿಧನ ನಂತರ ಖಾಲಿಯಾದ ಹಾನಗಲ್ ಕ್ಷೇತ್ರ ಹಾಗೂ ಸಿಂದಗಿ ಕ್ಷೇತ್ರದ ಅಭ್ಯರ್ಥಿ ಇನ್ನೂ ಫೈನಲ್ ಮಾಡಿಲ್ಲ. ಆ ಬಗ್ಗೆ ನಾಯಕರ ಸಮ್ಮುಖದಲ್ಲಿ ಚರ್ಚೆ ಮಾಡಿ‌ ಆದಷ್ಟು ಬೇಗ ಅಭ್ಯರ್ಥಿ ಘೋಷಣೆ ಮಾಡಲಾಗುವುದು. ಅಲ್ಲದೆ ಆ ಕ್ಷೇತ್ರಗಳಲ್ಲಿ ಚುನಾವಣೆ ಆಯೋಗ ಚುನಾವಣೆ ಘೋಷಣೆ ಮಾಡಿಲ್ಲ. ನಮ್ಮ ಪಕ್ಷದ ನಾಯಕರೆಲ್ಲರೂ ಸೇರಿ ಅಭ್ಯರ್ಥಿ ಯಾರನ್ನು ಮಾಡಬೇಕು ಚರ್ಚೆ ನಡೆಸುತ್ತೆವೆ. ಅಲ್ಲದೆ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿದರೆ ಮಾಡಲಿ, ಅವರ ಲೆಕ್ಕ ಬೇರೆ ನಮ್ಮ ಲೆಕ್ಕಾಚಾರವೇ ಬೇರೆ ಎಂದು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button