ಸಂಸದರು ಹಾಗೂ ಕೇಂದ್ರ ಸಚಿವರು ಪ್ರಧಾನಿ ಮೋದಿ ಮುಂದೆ ಮಾತನಾಡಲು ಹೆದರುತ್ತಿದ್ದಾರೆ: ಡಿ ಕೆ ಶಿವಕುಮಾರ್

ರಾಮನಗರ : ಸಂಸದರು ಹಾಗೂ ಕೇಂದ್ರ ಸಚಿವರು ಮೋದಿ ಮುಂದೆ ಮಾತನಾಡಲು ಹೆದರುತ್ತಿದ್ದಾರೆ. ಎಲ್ಲಿ ನಮ್ಮ ಸ್ಥಾನಗಳು ಅಧಿಕಾರ ಹೋಗುತ್ತೆ ಅಂತಾ ಭಯ ಪಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರಾಮನಗರ ಜಿಲ್ಲೆ ಕನಕಪುರದಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರ ಆಗಲಿ ಯಾವುದೇ ವಿಚಾರ ಆಗಲಿ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಮಾತನಾಡಲು ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರುಗಳ ಮಾತಿಲ್ಲ ಉಸಿರು ನಿಂತ್ತು ಹೋಗುತ್ತದೆ. ಧೈರ್ಯವಾಗಿ ಮಾತನಾಡುವ ಶಕ್ತಿಯನ್ನ ಹಿರಿಯ ಬಿಜೆಪಿ ಮುಖಂಡರು ಕಳೆದು ಕೊಂಡಿದ್ದಾರೆ ಎಂದರು.
ಹಾಗೆಯೇ ಸಿ.ಟಿ.ರವಿ ವಿಚಾರ ಸಂಬಂಧಿಸಿದಂತೆ ಅವರು ಯಾವುದೊ ನಶೆಯಲ್ಲಿದ್ದಾರೆ ಅವರ ಬಗ್ಗೆ ಮಾತನಾಡುವುದು ಬೇಡ. ನಾಲಿಗೆ ಹಿಡಿತ ಇಟ್ಟುಕೊಂಡು ಮಾತನಾಡದ್ರೆ ಒಳ್ಳೆಯದು. ಸಿ.ಟಿ.ರವಿ ಕುಡಿದು ನಶೆಯಲ್ಲಿ ಮಾತನಾಡಿಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದೇ ವೇಳೆ ತಿಳಿಸಿದರು.
ಇನ್ನು ಮೇಕೆದಾಟು ವಿಚಾರದಲ್ಲಿ ಸಚಿವರುಗಳ ಹೇಳಿಕೆ ಪ್ರಚಾರಕ್ಕಾಗಿ ಅಷ್ಟೇ ಆಗಿದೆ. ಅವರಿಗೆ ಧೈರ್ಯ ಇದ್ರೆ ಭದ್ದತೆ ಇದ್ರೆ ಪ್ರಧಾನಮಂತ್ರಿ ಹಾಗೂ ಕೇಂದ್ರ ನೀರಾವರಿ ಸಚಿವರನ್ನ ನೇರವಾಗಿ ಭೇಟಿ ಮಾಡಲಿ ನೋಡೋಣ. ರಾಜ್ಯದ 25 ಸಂಸದರು ಹೋರಾಟ ಮಾಡಿ ಧರಣಿ ಮಾಡಿ ಮೇಕೆದಾಟು ಯೋಜನೆ ಪ್ರಾರಂಭ ಮಾಡಿಸಬೇಕು ಎಂದರು.
ಅದರಲ್ಲೂ ಬೆಂಗಳೂರಿನಲ್ಲಿರುವ 3 ಮಂದಿ ಸಂಸದರು ಹೋರಾಟ ಮಾಡಬೇಕು. ಕಾರಣ ಈ ಯೋಜನೆಯಿಂದ ಬೆಂಗಳೂರಿನ ಜನ್ರಿಗೆ ಕುಡಿಯುವ ನೀರು ಸಿಗುತ್ತದೆ. ಈ ಯೋಜನೆಗೆ ಕ್ರೇತ್ರದ ಜನರಾಗಿ ನಾವು ತಕರಾರು ಮಾಡಬೇಕು. ನಾವೇ ಮಾಡಿ ಅಂತಾ ಹೇಳುತ್ತಿದ್ದೇವೆ ಎಷ್ಟು ಜಮೀನು ಹೋದರು ಹೋಗಲಿ ಜನರನ್ನ ನಾವು ಒಪ್ಪಿಸುತ್ತೇನೆ ಎಂದು ತಿಳಿಸಿದರು.
ಇದಲ್ಲದೆ ಈ ಯೋಜನೆಯಲ್ಲಿ ಒಂದು ಎಕರೆಗು ನೀರು ಬಳಸಿಕೊಳ್ಳುವುದಿಲ್ಲ ಎಲ್ಲವು ಕುಡಿಯುವ ನೀರಿಗಾಗಿ ಅಷ್ಟೆ. ಈ ಯೋಜನೆಯಲ್ಲಿ ವಿದ್ಯುತ್ ಶಕ್ತಿ ತಯಾರು ಮಾಡಲಾಗುತ್ತೆ ಬೇಕಿದ್ರೆ ತಮಿಳುನಾಡಿನ ಸರಕಾರ ಖರೀದಿ ಮಾಡಲಿ. ಸಚಿವ ಅಶ್ವಥ್ ನಾರಾಯಣ್ ಅವರು ಕೇಂದ್ರ ಸರಕಾರ ಮೇಕೆದಾಟು ವಿಚಾರವಾಗಿ ನಮ್ಮ ಪರ ಇದೆ ಅಂತಾ ಹೇಳಿದ್ದಾರೆ. ಈ ಒಂದು ಮಾತು ಸಾಕು ತಮಿಳುನಾಡಿನ ಸರಕಾರಕ್ಕೆ ಇದನ್ನೆ ಒಂದು ಗ್ರಿಪ್ ಹಿಡಿದುಕೊಂಡು ಕೋರ್ಟ್ ಗೆ ಅರ್ಜಿ ಸಲ್ಲಿಸಿ ಬಿಡುತ್ತಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಸರಕಾರ ಇದ್ರೆ ಕೆಲಸ ಹಾಗುತ್ತೆ ಅಂತಾ ಅಶ್ವಥ್ ನಾರಾಯಣ್ ಹೇಳಿದ್ರಲ್ಲ ಮಾಡಿಸಲಿ. ಅಶ್ವಥ್ ನಾರಾಯಣ್ ಅವರು ಬೇಜವಬ್ದಾರಿ ಹೇಳಿಕೆಗಳನ್ನ ಕೊಡಬಾರದು. ಅವರು ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲಾ ಅವರು ಸಚಿವರು ಹೇಳಿಕೆಗಳನ್ನ ಕೊಡುವಾಗ ಜವಾಬ್ದಾರಿಯಾಗಿ ಮಾತನಾಡಬೇಕು ಎಂದರು.
