ಕೋಲಾರ
ಕೋಲಾರದಲ್ಲಿ ಮುಂಗಾರು ಬಿಡುವು; ಬಿತ್ತನೆ ಕಾರ್ಯ ಚುರುಕು

ಕೋಲಾರ: ಸತತ 20 ದಿನಗಳಿಂದ ಮಳೆ ಪ್ರತಿನಿತ್ಯ ಸುರಿಯುತ್ತಲೇ ಇದ್ದ ಕಾರಣ ರೈತರು ಬಿತ್ತನೆ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ… ಎರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಬೀಳದ ಕಾರಣ ಬಿತ್ತನೆಗೆ ಇದು ಸೂಕ್ತವಾಗಿತ್ತು.
ಬಿತ್ತನೆ ಕಾರ್ಯಕ್ಕೆ ಬೇಕಾಗುವಷ್ಟು ತೇವಾಂಶ ಭೂಮಿಯಲ್ಲಿ ಇರುವುದರಿಂದ ಜಿಲ್ಲೆಯಾದ್ಯಂತ ರೈತರು ಸಂತಸದಿಂದ ಕಾಯಕ ಗೀತೆಗಳನ್ನು ಹಾಡುವ ಮೂಲಕ ರಾಗಿ, ಅವರೆ, ತೊಗರಿ ಬಿತ್ತನೆಯಲ್ಲಿ ತೊಡಗಿರುವ ದೃಶ್ಯಗಳು ಕಂಡುಬಂತು.




