ಕೋಲಾರ

ತಡರಾತ್ರಿ ಸುರಿದ ಮಳೆ; ಮನೆಗಳಿಗೆ ನುಗ್ಗಿದ ಚರಂಡಿ ನೀರು

ಕೋಲಾರ: ಕಳೆದ ರಾತ್ರಿ ಕೋಲಾರ ನಗರದಲ್ಲಿ ಭಾರೀ ಮಳೆ ಸುರಿದಿದೆ. ತಗ್ಗು ಪ್ರದೇಶಗಳ ಮನೆಗಳಿಗೆ ಚರಂಡಿ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಕೋಲಾರ ನಗರದ ರಹಮತ್ ನಗರ, ಶಾಂತಿ ನಗರ, ಕಾರಂಜಿಕಟ್ಟೆ, ಗಲ್ ಪೇಟೆ ಪೊಲೀಸ್ ವಸತಿ ನಿಲಯಗಳು ಸೇರಿದಂತೆ ತಗ್ಗು ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ತಗ್ಗು ಜನರು ರಾತ್ರಿಯಿಡೀ ಮನೆಯಿಂದ ಚರಂಡಿ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದರು. ಘಟನೆ ಸಂಬಂಧ ನಗರಸಭೆ ವಿರುದ್ದ ಆಕ್ರೋಶಗೊಂಡಿದ್ದು, ಚರಂಡಿ ಸ್ವಚ್ಛಗೊಳ್ಳಿಸದ ಹಿನ್ನೆಲೆ ನೀರು ಮನೆಗಳಿಗೆ ನುಗ್ಗಲು ಕಾರಣ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಮುಂಗಾರು ಪ್ರಾರಂಭವಾದಾಗಿನಿಂದ ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಕಳೆದ ಒಂದು ವಾರದಿಂದಂತೂ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಬಹುತೇಕ ಟೊಮ್ಯಾಟೋ ಬೆಳೆಗೆ ಹಾನಿಯಾಗಿದೆ.

ಇನ್ನು

Spread the love

Related Articles

Leave a Reply

Your email address will not be published. Required fields are marked *

Back to top button