ಕಲಾಮ್ಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಚಿನ್ನದ ಪದಕ ಗೆದ್ದ ಚಿನ್ನದ ನಾಡಿನ ಪುಟ್ಟ ಪೋರ

ಕೋಲಾರ: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಒಂದು ನಿಮಿಷದಲ್ಲಿ 25 ಮೊಂಬತ್ತಿಗಳನ್ನು ಹಚ್ಚುವ ಮೂಲಕ ಕಲಾಮ್ಸ್ ವರ್ಲ್ಡ್ ರೆಕಾರ್ಡ್ ಮಾಡಿ ಚಿನ್ನದ ಪದಕ ತನ್ನ ಮಡಲಿಗೇರಿಸಿಕೊಳ್ಳುವ ಮೂಲಕ ಚಿನ್ನದ ನಾಡಿಗೆ ಕೀರ್ತಿ ತಂದಿದ್ದಾನೆ.
ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ದ್ವಾರಸಂದ್ರ ಗ್ರಾಮದ ಚಂದ್ರಶೇಖರ್ ರೆಡ್ಡಿ ಮತ್ತು ಉಷಾ ದಂಪತಿಗಳ ಮಗ ಢೀರನ್ ಸಿ ರೆಡ್ಡಿ ಚೆನ್ನೈನಲ್ಲಿ ಮಾನವ ಹಕ್ಕುಗಳ ಆಯೋಗ ಆಯೋಜಿಸಿದ್ದ ಕಲಾಮ್ಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ ಒಂದೇ ನಿಮಿಷದಲ್ಲಿ 25 ಮೊಂಬತ್ತಿಗಳನ್ನು ಹಚ್ಚುವ ಮೂಲಕ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತನ್ನ ಮಡಿಲಿಗೆ ದಕ್ಕಿಸಿಕೊಂಡಿದ್ದಾನೆ.
ಈ ಮೊದಲು ಜುಲೈ ತಿಂಗಳಲ್ಲಿ ಹರಿಯಾಣ ರಾಷ್ಟ್ರದಲ್ಲಿ ನಡೆಸಿದ ಇಂಡಿಯನ್ ಬುಕ್ ಆಫ್ ರೆಕಾರ್ಡ್ 2021 ರಲ್ಲಿಯೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಒಂದು ನಿಮಿಷದಲ್ಲಿ 48 ಬಲೂನ್ ಗಳನ್ನು ಹೊಡೆಯುವುದು ಮತ್ತು ಒಂದು ನಿಮಿಷದಲ್ಲಿ 22 ಮೇಣದ ಬತ್ತಿಗಳನ್ನು ಹಚ್ಚುವ ಮೂಲಕ ಎರಡು ಚಿನ್ನದ ಪದಕಗಳನ್ನು ಗೆದ್ದು ಸಾಧಿಸಿದ್ದಾನೆ.
ಯೋಗ ಗುರುಗಳಾದ ಸತೀಶ್ ಪದ್ಮನಾಭರವರ ಮಾರ್ಗದರ್ಶನದಲ್ಲಿ ಬಾಲಕ ಢೀರನ್ ಸಿ ರೆಡ್ಡಿ ತನ್ನ 11 ನೆಯ ವಯಸ್ಸಿನಲ್ಲಿಯೇ ಮೂರು ಚಿನ್ನದ ಪದಕಗಳನ್ನು ಗೆದ್ದು ಅನೇಕ ಪ್ರಶಸ್ತಿಗಳನ್ನು ಪಡೆದು ಸಾಧಿಸಿದ್ದಾನೆ, ಪುಟ್ಟ ಬಾಲಕನ ಈ ಸಾಧನೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.




