ನಿಯಮ ಮೀರಿ ಪ್ರವಾಸಿಗರಿಗೆ ಆತಿಥ್ಯ; ರೆಸಾರ್ಟ್ ಮೇಲೆ ಅಧಿಕಾರಿಗಳು ದಾಳಿ

ಕೊಡಗು: ಕೊಡಗಿನಲ್ಲಿ ಕೊರೋನಾ ಲಾಕ್ ಡೌನ್ ಚಾಲ್ತಿಯಲ್ಲಿದ್ದು ಪ್ರವಾಸೋದ್ಯಮವನ್ನು ನಿಷೇದಿಸಲಾಗಿದೆ. ಈ ಕುರಿತು ಕೊಡಗು ಜಿಲ್ಲಾಡಳಿತ ದಿಂದ ಸುದ್ದಿಘೋಷ್ಟಿ ನಡೆಸಿ ಪ್ರಕಟಣೆಯನ್ನು ಹೊರಡಿಸಲಾಗಿತ್ತು.
ಆದರೆ ಈ ನಿಯಮ ಉಲ್ಲಂಘಿಸಿ ಕೊಡಗಿನ ಸುಂಟಿಕೊಪ್ಪ ಸಮೀಪದ ಕೂರ್ಗ್ ಕಾಫಿ ಫ್ಲವರ್ ರೆಸಾರ್ಟಿನಲ್ಲಿ ಪ್ರವಾಸಿಗರಿಗೆ ಆಶ್ರಯ ನೀಡಲಾಗಿತ್ತು. ಮಾಹಿತಿ ತಿಳಿದು ಸೋಮವಾರಪೇಟೆ ತಾಲ್ಲೂಕು ತಹಶೀಲ್ಧಾರ್ ಗೋವಿಂದ್ ರಾಜ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಗುರುವಾರ ಸಂಜೆ 7 ಗಂಟೆ ಸಮಯದಲ್ಲಿ ಕೂರ್ಗ್ ಕಾಫಿ ಫ್ಲವರ್ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದಾರೆ.
ಮೈಸೂರಿನಿಂದ ಪ್ರವಾಸಿಗರಾಗಿ ಆಗಮಿಸಿದ್ದ 8 ಮಂದಿ ಈ ರೆಸಾರ್ಟಿನಲ್ಲಿ ವಾಸ್ತವ್ಯವನ್ನು ಹೂಡಿದ್ದರು ಎನ್ನಲಾಗಿದೆ. ಕೊಡಗಿನಲ್ಲಿ ಕೊರೊನಾ ಸೋಂಕಿನ ಪಾಸಿಟಿವಿಟ್ ನಲ್ಲಿ ಏರುಪೇರು ಉಂಟಾಗಿರುವುದರಿಂದ ಹೊರಜಿಲ್ಲೆ ಮತ್ತು ಹೊರರಾಜ್ಯದ ಪ್ರವಾಸಿಗರಿಗೆ ನಿರ್ಬಂಧ ಹೇರಿ ಕೊಡಗಿನ ಎಲ್ಲ ಜೋಂಸ್ಟೇ , ಲಾಡ್ಜ್ ಮತ್ತು ರೆಸಾರ್ಟ್ ಗಳನ್ನು ತೆರೆಯದಂತೆ ಜಿಲ್ಲಾಡಳಿತ ಸೂಚಿಸಿತ್ತು.
ಆದರೆ ಆದೇಶವನ್ನು ಉಲ್ಲಂಘಿಸಿದ ರೆಸಾರ್ಟ್ ಮಾಲೀಕರು ಪ್ರವಾಸಿಗರಿಗೆ ಆಶ್ರಯ ನೀಡಿದ್ದರಿಂದ ಅಧಿಕಾರಿಗಳು ಧಾಳಿ ನಡೆಸಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ದೂರು ದಾಖಲಿಸಲಾಗಿದೆ.
ಧಾಳಿಯ ಸಂದರ್ಭ ಸುಂಟಿಕೊಪ್ಪ ಪಿಎಸ್ಐ ಪುನಿತ್, ಸಿಬ್ಬಂದಿ ಖಾದರ್, ಕಂದಾಯ ಪರಿವೀಕ್ಷಕ ಶಿವಪ್ಪ, ಗ್ರಾಮ ಲೆಕ್ಕಿಗರಾದ ನಸೀಮಾ, ರೂಪ, ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ಪಿಡಿಒ ಗೋಳಪ್ಪ ಇದ್ದರು.




