ಲಯನ್ಸ್ ಸಂಸ್ಥೆಯಿಂದ ಸಾಧಕ ಶಿಕ್ಷಕರಿಗೆ ಸನ್ಮಾನ

ಮಡಿಕೇರಿ: ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಒಕ್ಕಲಿಗರ ಸಮಾಜದ ಶ್ರೀಗಂಧ ಸಭಾಂಗಣದಲ್ಲಿ ನಡೆದ ವಲಯ ಅಧ್ಯಕ್ಷರ ಭೇಟಿ ಹಾಗೂ ಸಾಧಕರಿಗೆ ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಬದುಕು ರೂಪಿಸಿದ ಶಿಕ್ಷಕರನ್ನು ನೆನೆಯುವ ಕೆಲಸ ಎಲ್ಲರೂ ಮಾಡಬೇಕಾಗಿದೆ ಎಂದು ಲಯನ್ಸ್ ವಲಯ ಅಧ್ಯಕ್ಷ ಗ್ಲೆನ್ ನಿಶಾಂತ್ ಮೆನೆಜಸ್ ಹೇಳಿದರು.
ಲಯನ್ಸ್ ಸಂಸ್ಥೆ ಸೇವಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿದೆ. ನಮ್ಮ ಸಂಸ್ಥೆಯು ಸೇವೆ ಮತ್ತು ಆತಿಥ್ಯಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಎಲ್ಲ ಸದಸ್ಯರು ಅದನ್ನು ಮುಂದುವರೆಸಬೇಕೆಂದರು.
ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾಶಿವ ಪಲ್ಲೆದ್, ಕಿಬ್ಬೆಟ್ಟ ಶಾಲೆಯ ಶಿಕ್ಷಕಿ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಎಂ.ಪಿ. ವಿಶಾಲಾಕ್ಷಿ ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಸಂಸ್ಥೆಯಿಂದ ವಿವಿಧ ಪ್ರಶಸ್ತಿಗೆ ಭಾಜನರಾದ ಜೆ.ಸಿ,ಶೇಖರ್, ಕೆ.ಎಂ.ಜಗದೀಶ್, ಎಂ.ಎ.ಹರೀಶ್, ಮಹೇಶ್ ಅವರುಗಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಲಯನ್ಸ್ ಅಧ್ಯಕ್ಷ ಸಿ.ಕೆ.ಮಲ್ಲಪ್ಪ, ವಲಯಾ ಪ್ರಥಮ ಮಹಿಳೆ ಟೀನಾ ನಿಶಾಂತ್, ಕಾರ್ಯದರ್ಶಿ ಜಿ.ಎಸ್. ರಾಜಾರಾಮ್, ಖಜಾಂಚಿ ಸಿ.ಕೆ. ರಾಜು, ಮೆಂಟರ್ ಎಸ್.ಎನ್. ಯೋಗೇಶ್, ಜಲಜಾ ಶೇಖರ್ ಹಾಜರಿದ್ದರು.




