ಕೊಡಗು
ಕಾಡಾನೆ ದಾಳಿ; ಕಾರ್ಮಿಕರಿಗೆ ಗಾಯ

ಮಡಿಕೇರಿ : ಬೈಕ್ ನಲ್ಲಿ ತೆರಳುತ್ತಿದ್ದ ಕಾರ್ಮಿಕರಿಬ್ಬರ ಮೇಲೆ ಕಾಡಾನೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಇಂದು ಬೆಳಗ್ಗೆ ಮಾಲ್ದಾರೆ ಸಮೀಪದ ಗಾರೆಕಟ್ಟೆಯಲ್ಲಿ ನಡೆದಿದೆ.
ಉಸ್ಮಾನ್ ಮತ್ತು ರಾಮನ್ ಎಂಬಿಬ್ಬರು ಕಾರ್ಮಿಕರು ಬೈಕ್ ನಲ್ಲಿ ಕೆಲಸಕ್ಕೆಂದು ಮಾಲ್ದಾರೆಯಿಂದ ಸಿದ್ದಾಪುರದತ್ತ ತೆರಳುತ್ತಿದ್ದಾಗ ದಿಢೀರ್ ಪ್ರತ್ಯಕ್ಷವಾದ ಕಾಡಾನೆ ಬೈಕ್ ಅನ್ನು ಅಡ್ಡಗಟ್ಟಿದೆ. ಬೈಕ್ ನಲ್ಲಿದ್ದ ಕಾರ್ಮಿಕರಿಬ್ಬರ ಮೇಲೆರಗಿ ಘಾಸಿಗೊಳಿಸಿದೆ. ಮತ್ತಗದ ದಾಳಿಯಿಂದ ತೀವ್ರವಾದ ಗಾಯಕ್ಕೊಳಗಾಗಿರುವ ಈರ್ವರನ್ನು ಸಿದ್ಧಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಡಾನೆಯ ಹಿಡಿತಕ್ಕೆ ಸಿಲುಕಿದ ಬೈಕ್ ನಜ್ಜುಗುಜ್ಜಾಗಿದೆ.




