ಕೊಡಗು
ನೇಣು ಬಿಗಿದ ಸ್ಥಿತಿಯಲ್ಲಿ ಗ್ರಾ.ಪಂ ಸದಸ್ಯೆ, ಆಕೆಯ ಸಂಬಂಧಿ ಮೃತದೇಹ ಪತ್ತೆ

ಮಡಿಕೇರಿ: ತಾಲ್ಲೂಕಿನ ಚೆಂಬು ಗ್ರಾಮದ ಗುಡ್ಡದ ಮರದಲ್ಲಿ ಜೋಡಿ ಶವ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಚೆಂಬು ಗ್ರಾ.ಪಂ ಸದಸ್ಯೆ ಕಮಲ (35) ಹಾಗೂ ಆಕೆಯ ಸಂಬಂಧಿ ಮುತ್ತು (50) ಎಂಬುವವರು ಸಾವಿಗೀಡಾದವರು ಎಂದು ಗುರುತಿಸಲಾಗಿದೆ.
ಸೆ.15 ರ ಸಂಜೆಯಿಂದ ಇಬ್ಬರು ದಬ್ಬಡ್ಕ ಗ್ರಾಮದಿಂದ ನಾಪತ್ತೆಯಾಗಿದ್ದು, ಗ್ರಾಮಸ್ಥರು ಹುಡುಕಿದರೂ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಮರದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಗ್ರಾ.ಪಂ ಸದಸ್ಯೆ ಕಮಲ ವಿವಾಹಿತೆಯಾಗಿದ್ದು, ಒಂದು ಮುಗುವಿದೆ. ಮೃತ ಮುತ್ತು ಕಮಲಳ ಸಂಬಂಧಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಘಟನೆಯಿಂದ ಚೆಂಬು ಗ್ರಾಮ ಬೆಚ್ಚಿ ಬಿದ್ದಿದ್ದು, ಪ್ರಕರಣದ ಕುರಿತು ಹಲವು ಸಂಶಯಗಳು ವ್ಯಕ್ತವಾಗಿದೆ.




