ಕೊಡಗು

ರಾಜ್ಯಮಟ್ಟದ ವುಶು ಕಿಕ್ ಬಾಕ್ಸಿಂಗ್ ‌ಚಾಂಪಿಯನ್​ಶಿಪ್​ನಲ್ಲಿ ಸಹೋದರರಿಬ್ಬರಿಗೂ ಚಿನ್ನ; ರಾಷ್ಟ್ರಮಟ್ಟಕ್ಕೆ ಆಯ್ಕೆ

ಮಡಿಕೇರಿ : ರಾಜ್ಯ ಮಟ್ಟದ ವುಶು ಚಾಂಪಿಯನ್ ಶಿಪ್ ಸ್ಪರ್ಧೆಯ ಕಿಕ್ ಬಾಕ್ಸಿಂಗ್ ವಿಭಾಗದಲ್ಲಿ ನೆಲ್ಲಿಹುದಿಕೇರಿಯ ಶ್ರೀಚರಣ್ ಹಾಗೂ ಶ್ರೀಕುಮಾರ್ ಸಹೋದರರು ಚಿನ್ನದ ಪದಕ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ ವುಶು ಅಸೋಸಿಯೇಷನ್, ವುಶು ಅಸೋಸಿಯೇಷನ್, ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಹಯೋಗದಲ್ಲಿ ಮೂಡುಬಿದಿರೆ ಆಳ್ವಾಸ್ ನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಹೋದರರು ವಿಜೇತರಾಗಿದ್ದಾರೆ.

ನೆಲ್ಲಿಹುದಿಕೇರಿಯ ಎಪಿಜೆ ಬಡಾವಣೆಯ ಕೆ.ಸಿ.ಶಶಿ, ರೀನಾ ದಂಪತಿಗಳ ಪುತ್ರರಾಗಿರುವ ಸಿದ್ದಾಪುರ ಸಂತ ಅನ್ನಮ್ಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಕೆ.ಎಸ್.ಶ್ರೀಚರಣ್ ಚಿನ್ನದ ಪದಕ ಗೆದ್ದರೆ, 9ನೇ ತರಗತಿ ವಿದ್ಯಾರ್ಥಿ ಸಹೋದರ ಕೆ.ಎಸ್.ಶ್ರೀಕುಮಾರ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಈ ಹಿಂದೆ ಕೊಡಗು, ಮಂಗಳೂರು, ಮೈಸೂರು, ಬೆಂಗಳೂರು, ಬಾಗಲಕೋಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆದ ವುಶು ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನ ಬೆಳ್ಳಿಯೊಂದಿಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡು ಮಾದರಿಯಾಗಿದ್ದಾರೆ.

ತರಬೇತುದಾರ ಸುದರ್ಶನ್ ಅವರ ಬಳಿ ತರಬೇತಿ ಪಡೆಯುತ್ತಿರುವ ಸಹೋದರರು ಕೊಲ್ಕತ್ತಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button