ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಬೇಜವಾಬ್ದಾರಿ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಕುಂಠಿತವಾಗಿ: ಹೊರಟ್ಟಿ ಅಸಮಾಧಾನ

ಧಾರವಾಡ: ಶಿಕ್ಷಕರ ವರ್ಗಾವಣೆಯನ್ನು ಸುಗ್ರೀವಾಜ್ಞೆಯ ಮೂಲಕ ಮಾಡಬೇಕಾಗಿತ್ತು. ಆದರೆ ಶಿಕ್ಷಣ ಇಲಾಖೆಯಲ್ಲಿನ ಕೆಲವು ಬೇಜವಾಬ್ದಾರಿ ಅಧಿಕಾರಿಗಳಿಂದಾಗಿ ವರ್ಗಾವಣೆ ಕುಂಠಿತಗೊಂಡಿದೆ. ಕೆಲವರೂ ಕಡ್ಡಾಯ ವರ್ಗಾವಣೆಗಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಅಕ್ಟೋಬರ್ 4ರಂದು ವಿಚಾರಣೆ ನಡೆಯಲಿದೆ, ವಿಚಾರಣೆ ಬಳಿಕ ಮತ್ತೆ ವರ್ಗಾವಣೆ ಪ್ರಾರಂಭವಾಗುತ್ತದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಯಾವುದು ಸರಿಯಿಲ್ಲ. ಹೊಸದಾಗಿ ಬರುವ ಮಂತ್ರಿಗಳಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುವುದಿಲ್ಲ. ಪರಿಣಾಮ ಶಿಕ್ಷ ಇಲಾಖೆಯ ಮೂರ್ಖ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಕುಂಠಿತಗೊಂಡಿದೆ. ಆದರೆ ಇಲಾಖೆಯ ಕೆಲ ಬೇಜವಾಬ್ದಾರಿ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಮೂರು ತಿಂಗಳ ವಿಳಂಬವಾಗಿದೆ. ಇದೀಗ ಈ ವಿಷಯ ಕೋರ್ಟ್ ನಲ್ಲಿದ್ದು ಅಕ್ಟೋಬರ್ 4 ರಂದು ವಿಚಾರಣೆ ಇದ್ದು, ಆ ಬಳಿಕೆ ಮತ್ತೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಕೋವಿಡ್ ಸಂದರ್ಭದಲ್ಲಿ ಕಾರ್ಯನಿರ್ವಹಿಸಿ ಮೃತಪಟ್ಟ ಶಿಕ್ಷಕರಿಗೆ ಈಗಾಗಲೇ ಪರಿಹಾರ ನೀಡಲಾಗುತ್ತಿದೆ. ಅದರಂತೆ ಸರ್ಕಾರ 176 ಜನರ ಪಟ್ಟಿ ಮಾಡಿದ್ದು, ಅವರಿಗೆಲ್ಲಾ ಪರಿಹಾರ ದೊರೆಯುವ ವಿಶ್ವಾಸವಿದೆ ಎಂದು ತಿಳಿಸಿದರು.

ಇನ್ನು ಇದೇ ವೇಳೆ 1 ರಿಂದ 5ರವರೆಗಿನ ಪ್ರಾಥಮಿಕ ಶಾಲಾ ತರಗತಿಗಳ ಆರಂಭದ ಕುರಿತು ಪ್ರತಿಕ್ರಿಯೆ ನೀಡಿ, ಒಂದರಿಂದ ಅಲ್ಲಾ ಸದ್ಯ 2, 3, 4,ನೇ ತರಗತಿ ಪ್ರಾರಂಭ ಮಾಡಬೇಕು. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವುದನ್ನು ತಪ್ಪಿಸಬಹುದಾಗಿದೆ. ಈ ಕುರಿತು ಕೂಡಾ ನಾನು ಮುಖ್ಯಮಂತ್ರಿಗಳೊಂದಿಗೆ ಮಾತಾಡಿದ್ದೇನೆ. ಅವರು ಕೂಡಾ ಅದಕ್ಕೆ ಒಪ್ಪಿ ಸೂಚಿಸಿದ್ದಾರೆ. ಆದಷ್ಟು ಬೇಗ ಪ್ರಾಥಮಿಕ ತರಗತಿಗಳು ಕೂಡಾ ಆರಂಭವಾಗುತ್ತವೆ ಎಂದು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button