ಕಲಬುರ್ಗಿ
ಶಾಸಕ ರೇವೂರ್ಗೆ ಘೆರಾವ್ ಹಾಕಿದ ಹೀರಾಪುರ ಬಡಾವಣೆ ನಿವಾಸಿಗಳು

ಕಲಬುರಗಿ: ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಕಾರು ತಡೆದು ಘೇರಾವ್ ಹಾಕಿ ಜನ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಹೀರಾಪುರ ಬಡಾವಣೆಯಲ್ಲಿ ನಡೆದಿದೆ.
ಕಾಮಗಾರಿ ಶಂಕುಸ್ಥಾಪನೆಗೆ ಹೊರಟಿದ್ದ ವೇಳೆ ಬಡಾವಣೆ ಜನ ಘೇರಾವ್ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಹದಿನೈದು ವರ್ಷಗಳಿಂದ ಹೀರಾಪುರ ಬಡಾವಣೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ನೀವುಗಳು ಚುನಾವಣೆಗೆ ಬಂದಾಗ ಮಾತ್ರ ನಮ್ಮ ಕಡೆ ಬರುತ್ತೀರಿ. ಆನಂತರ ನಮ್ಮ ಗೋಳು ಕೇಳುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಇದೇ ವೇಳೆ ಬಡವಾಣೆಯ ಸಮಸ್ಯೆಗಳನ್ನು ಪರಿಹರಿಸುವಂತೆ ಶಾಸಕರಿಗೆ ಮನವಿ ನೀಡಿ ಕೂಡಲೇ ಬಡಾವಣೆಗೆ ಅಗತ್ಯ ರೀತಿಯ ಮೂಲಭೂತ ಸೌಲಭ್ಯಗಳನ್ನ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.




