Breaking NewsLatestಕಲಬುರ್ಗಿರಾಜಕೀಯ

ಸಿದ್ದರಾಮಯ್ಯ ಕಾಂಗ್ರೆಸ್​ನಲ್ಲಿ ಇರುವವರೆಗೆ ಡಿಕೆಶಿ ಸಿಎಂ ಆಗುವುದಿಲ್ಲ: ಸಿಪಿ ಯೋಗೇಶ್ವರ್

ಕಲಬುರಗಿ: ಸಿದ್ದರಾಮಯ್ಯ ಇರೋವರೆಗೆ ಡಿಕೆ ಶಿವಕುಮಾರ್ ಸಿಎಂ ಆಗುವದಿಲ್ಲ ಎಂದು ಸಚಿವ ಸಿಪಿ ಯೋಗೇಶ್ವರ್ ಭವಿಷ್ಯ ನುಡಿದಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಯೋಗೇಶ್ವರ್, ಡಿಕೆಶಿಗೆ ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದಾನೆ. ಸಿದ್ದರಾಮಯ್ಯ ಇರೋವರೆಗೆ ಅದು ಯಾವುದೇ ಕಾರಣಕ್ಕೂ ಇಡೇರುವದಿಲ್ಲ, ಡಿಕೆಶಿಗೆ ಶಾಸಕರ ಬೆಂಬಲವೂ ಇಲ್ಲ ಎಂದು ಯೋಗೇಶ್ವರ ಹೇಳಿದರು. 70 ವರ್ಷದಿಂದ ದಲಿತ ಸಮುದಾಯ ಕಾಂಗ್ರೆಸ್ ಪರವಿತ್ತು. ಆದರೆ ಅವರಿಗೆ ಅನ್ಯಾಯವಾದ ಹಿನ್ನಲೆ ದಲಿತ ಸಿಎಂ ಆಗಬೇಕೆಂಬ ಕೂಗು ಕೇಳಿ ಬರುತ್ತಿದೆ. ಮುಂದೆ ಇದು ಬಲಿಷ್ಠ ಆಗಲಿದೆ ಎಂದರು.

ಇನ್ನು ಬಿಜೆಪಿಯ ಕಾರ್ಯಕರ್ತನಾಗಿ ನನ್ನ ಭಾವನೆಗಳನ್ನು ಹೈಕಮಾಂಡ್ ಮುಂದೆ ಹೇಳಿಕೊಂಡಿದ್ದೇನೆ. ವಾದ-ವಿವಾದ ಎಲ್ಲವೂ ಮುಗಿದಿದೆ. ಈಗ ಜಡ್ಜ್ಮೆಂಟ್ ಬರುವ ನಿರೀಕ್ಷೆಯಲ್ಲಿದ್ದೇವೆ. ಪಕ್ಷದ ಹೈಕಮಾಂಡ್ ಏನಾದ್ರೂ ಮಾರ್ಗಸೂಚಿ ನೀಡುತ್ತದೆ ಎಂಬ ಆಶಾಭಾವನೆ ಇದೆ.

ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರ ಮಾಧ್ಯಮದಲ್ಲಿ ನೋಡಿದ್ದೇನೆ. ಎಲ್ಲವನ್ನು ಪಕ್ಷದ ಚೌಕಟ್ ನಲ್ಲಿ ಸರಿಮಾಡಿಕೊಂಡು ಹೋಗುತ್ತೇವೆ. ನಮ್ಮ ಬಳಿ ಯಾವುದೇ ರೀತಿಯ ಗೊಂದಲವಿಲ್ಲ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button