ಕಲಬುರ್ಗಿ

ಅಮಿತ್ ಶಾ ಹೇಳಿಕೆಯೇ ಫೈನಲ್: ಸಚಿವ ಸುನೀಲ್ ಕುಮಾರ

ಕಲಬುರಗಿ: ಅಮಿತ್ ಶಾ ನಮ್ಮ ಪರಮೋಚ್ಛ ನಾಯಕರು ಅವರ ಹೇಳಿಕೆಯೇ ಎಲ್ಲರ ಹೇಳಿಕೆ ಅಂತ ಇಂಧನ ಸಚಿವ ವಿ‌.ಸುನೀಲ್ ಕುಮಾರ್ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಸುನೀಲ್ ಕುಮಾರ್, ಮುಂದಿನ ಚುನಾವಣೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸುತ್ತೇವೆ ಎಂಬ ಅಮಿತ್ ಶಾ ಹೇಳಿಕೆ ಪ್ರತಿಕ್ರಿಯೆ ನೀಡಿದರು. ಅಮೀತ್ ಶಾ ಅವರೆ ನಮ್ಮ ಪರಮೋಚ್ಛ ನಾಯಕರು, ಅವರ ಹೇಳಿಕೆಗಳೆ ಫೈನಲ್ ಅಂತ ಹೇಳಿದರು.

ಲಂಚ ಪಡೆದ ಅಧಿಕಾರಿಗಳ ವಿರುದ್ಧ 24ಗಂಟೆಯಲ್ಲಿ ಕ್ರಮ

ರೈತರ ಬಳಿ ಲಂಚ ಪಡೆದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅಂತ ಇದೆ‌ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು‌. ಟ್ರಾನ್ಸಪಾರ್ಮರ್ ಅಳವಡಿಕೆಗೆ ಅಧಿಕಾರಿಗಳು ಲಂಚದ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂಬ ದೂರು ಬಂದಿವೆ. ರೈತರು ನಿರ್ಧಿಷ್ಟವಾದ ದೂರು ನೀಡಿದರೆ ಹಣ ಕೇಳಿದವರ ವಿರುದ್ಧ 24 ಗಂಟೆಯಲ್ಲಿ ಕ್ರಮ ಕೈಗೊಳುವದಾಗಿ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button