ಕಲಬುರ್ಗಿಯ ಜನತೆಗೆ ಸದ್ಯಕ್ಕಿಲ್ಲ ಒಮಿಕ್ರಾನ್ ಆತಂಕ: ಸೌದಿ ರಿಟರ್ನರ್ ವರದಿ ನೆಗೆಟಿವ್

ಕಲಬುರ್ಗಿ: ಒಮಿಕ್ರಾನ್ ಆತಂಕದಲ್ಲಿದ್ದ ಕಲಬುರ್ಗಿ ಜಿಲ್ಲೆ ಜನತೆ ಈಗ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಯಾಕಂದ್ರೆ ಸೌದಿ ಅರೇಬಿಯಾದಿಂದ ಆಗಮಿಸಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಶಂಕಿತ ಒಮಿಕ್ರಾನ್ ರೋಗಿಗೆ ಒಮಿಕ್ರಾನ್ ನೆಗೆಟಿವ್ ವರದಿ ಬಂದಿದೆ.
ಜಿನೋಮಿಕ್ ಸ್ವಿಕೆನ್ಸ್ ವರದಿಯಲ್ಲಿ ಒಮಿಕ್ರಾನ್ ನೆಗೆಟಿವ್ ವರದಿ ಬಂದಿದೆ. ಇತ್ತಿಚಿಗೆ ಸೌದಿ ಅರೇಬಿಯಾದಿಂದ ಆಗಮಿಸಿದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನಲೆ ಒಮಿಕ್ರಾನ್ ಟೆಸ್ಟ್ ಗೆ ಕಳುಹಿಸಲಾಗಿತ್ತು. ಇದೀಗ ಒಮಿಕ್ರಾನ್ ನೆಗೆಟಿವ್ ವರದಿ ಬಂದಿದ್ದು ನೆಮ್ಮದಿಯ ಉಸಿರು ಬಿಡುವಂತಾಗಿದೆ.
ಇನ್ನು ಕಲಬುರಗಿ ಜಿಲ್ಲೆಗೆ ವಿದೇಶದಿಂದ 25 ಜನ ಬಂದಿದ್ದಾರೆ. ಎಲ್ಲರಿಗೂ ನೆಗೆಟಿವ್ ಇದೆ ನಮ್ಮ ಜಿಲ್ಲೆಯಲ್ಲಿ ಒಮಿಕ್ರಾನ್ ವೇರಿಯಂಟ್ ಯಾವುದು ಇಲ್ಲ. ಒಮಿಕ್ರಾನ್ ವೆರಿಯಂಟ್ ಫಾಸ್ಟ್ ಆಗಿ ಹಬ್ಬತ್ತಿರುವ ಹಿನ್ನಲೆ ಜಿಲ್ಲಾಡಳಿತ ಎಲ್ಲಾ ಕ್ರಮ ಕೈಗೊಳ್ಳಲಾಗ್ತಿದೆ ಎಂದು ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಮೊದಲ ಡೋಸ್ ವ್ಯಾಕ್ಸಿನ್ ಚೆನ್ನಾಗಿ ಆಗಿದೆ. ಎರಡನೆ ಡೋಸ್ ವ್ಯಾಕ್ಸಿನ್ ಹಾಕಿಸಿಕೊಳ್ಳದವರು ಆದಷ್ಟು ಬೇಗ ಹಾಕಿಸಿಕೊಳ್ಳಬೇಕು. ತಾಲ್ಲೂಕು ಆಸ್ಪತ್ರೆಯಲ್ಲಿ 100 ಬೆಡ್ ಗಳನ್ನ ನಿರ್ಮಾಣ ಮಾಡಲಾಗಿದೆ. 50 ಐಸಿಯು ಬೆಡ್ ಗಳನ್ನ ನಿರ್ಮಾಣ ಮಾಡಲಾಗಿದೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ ಸೇರಿ 720 ಬೆಡ್ ಇದೆ ಎಂದು ತಿಳಿಸಿದ್ದಾರೆ.




