ಕಲಬುರ್ಗಿಜಿಲ್ಲಾ ಸುದ್ದಿರಾಜಕೀಯ

ನಾಳೆ MLC ಚುನಾವಣಾ ಫಲಿತಾಂಶ : ಮತ ಏಣಿಕೆಗೆ ಸಕಲ ಸಿದ್ಧತೆ

ಕಲಬುರಗಿ: ಕಲಬುರಗಿ-ಯಾದಗಿರಿ ವಿಧಾನ ಪರಿಷತ್ ಚುನಾವಣೆಯ ಮತ ಏಣಿಕೆ ನಾಳೆ ನಗರದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದು ಅಗತ್ಯ ಸಿದ್ದತೆ ಪೂರ್ಣಗೊಂಡಿರುವುದಾಗಿ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ತಿಳಿಸಿದ್ದಾರೆ.

ಡಿ.10ರಂದು ನಡೆದ ಸ್ಥಳಿಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಭವಿಷ್ಯದ ನಾಳೆ ನಿರ್ಧಾರವಾಗಲಿದ್ದು. ಮತ ಏಣಿಕೆ ಕಾರ್ಯವು ಗುಲಬರ್ಗಾ ವಿವಿ ಆವರಣದ ಗಣಿತ ವಿಭಾಗದಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಏಣಿಕೆ ಕಾರ್ಯ ಶುರುವಾಗಲಿದೆ.

ಡಿ.10ರಂದು ನಡೆದ ಮತದಾನದಲ್ಲಿ 7,088 ಮತದಾರರಲ್ಲಿ 7,070 ಜನ ತಮ್ಮ ಹಕ್ಕನ್ನು ಚಲಾಯಿಸಿದ್ದರು. ನಾಳೆ ಮತ ಎಣಿಕೆಗೆ 14 ಟೇಬಲ್ ಗಳನ್ನು ಸ್ಥಾಪಿಸಲಾಗಿದ್ದು. 28 ಜನ ಸಿಬ್ಬಂದಿ ನೇಮಕ‌ ಮಾಡಲಾಗಿದೆ. ಅಂದಾಜು ಮಧ್ಯಾನದವರೆಗೆ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ.

Spread the love

Related Articles

Leave a Reply

Your email address will not be published. Required fields are marked *

Back to top button