ಕಲಬುರ್ಗಿಜಿಲ್ಲಾ ಸುದ್ದಿರಾಜಕೀಯ

ಕಲಬುರಗಿ ಪಾಲಿಕೆ ಚುನಾವಣೆ: ಶಾಂತಿಯುತ ಮತದಾನಕ್ಕೆ ಸಿದ್ಧತೆ, ನಾಳೆ ಮತಪೆಟ್ಟಿಗೆ ಸೇರಲಿದೆ 300 ಅಭ್ಯರ್ಥಿಗಳ ಹಣೆಬರಹ

ಕಲಬುರಗಿ: ಬಿಸಿಲೂರು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಮತದಾನಕ್ಕೆ ಕ್ಷಣ ಗಣನೆ ಶುರುವಾಗಿದೆ. ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ವೋಂಟಿಗ್ ನಡೆಯಲಿದ್ದು, ಶಾಂತಿಯುತ ಮತದಾನಕ್ಕಾಗಿ ಜಿಲ್ಲಾಡಳಿತ ಸಕಲ ರೀತಿಯ ಸಿದ್ದತೆ ಮಾಡಿಕೊಂಡಿದೆ.

55 ಸದಸ್ಯ ಬಲ ಹೊಂದಿರುವ ಕಲಬುರಗಿ ಪಾಲಿಕೆ ಚುನಾವಣೆ ಅಖಾಡದಲ್ಲಿ 300 ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್-55, ಬಿಜೆಪಿ- 47, ಜೆಡಿಎಸ್- 46, ಆಮ್ ಆದ್ಮಿ – 26, ಬಿಎಸ್ ಪಿ- 6 ಹಾಗೂ ಇತರೆ ಪಕ್ಷೇತರ-120 ಸೇರಿ ಒಟ್ಟು 300 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ವಿಜಯ ಮಾಲೆ ಧರಿಸಿಸಲು ಸೆಣಸಾಡಿರುವ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಮತದಾನಕ್ಕಾಗಿ 533 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, ಮಹಿಳಾ, ಪುರುಷ, ಇತರೆ ಸೇರಿ ಒಟ್ಟು 5 ಲಕ್ಷ 19 ಸಾವಿರಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕನ್ನ ಚಲಾಯಿಸಲಿದ್ದಾರೆ.

ವೋಟಿಂಗ್ ಕರ್ತವ್ಯಕ್ಕೆ 2570 ಪೋಲಿಂಗ್ ಸಿಬ್ಬಂದಿ, ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಭದ್ರತೆಗಾಗಿ 200 ಹೋಮ್ ಹಾರ್ಡ್ಸ್, 36 ಪೊಲೀಸ್ ಇನ್ಸಪೇಕ್ಟರ್, 2 ಡಿಸಿಪಿ, 16 ಎಸಿಪಿ, ಸಿಪಿಐ, ಪಿಎಸ್ ಐ, ಎಎಸ್ ಐ, 796 ಪೊಲೀಸ್ ಕಾನ್ಸಟೆಬ್ಸ್ ಸೇರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ಚುನಾವಣೆ ಕರ್ತವ್ಯಕ್ಕೆ ಬಂದೋಬಸ್ತ್ ಗಾಗಿ ನಿಯೋಜನೆ ಮಾಡಲಾಗಿದೆ.

ಒಟ್ಟಾರೆ ಶಾಂತಿಯುತ, ನ್ಯಾಯಸಮ್ಮತ, ನಿರ್ಭಿತಿಯಿಂದ ಮತದಾನ ನಡೆಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡು ಸಜ್ಜಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button