ಕೊಡಗುಜಿಲ್ಲಾ ಸುದ್ದಿ

Crime News: ಲಾರಿಯಲ್ಲಿ ಅಕ್ರಮ ಗೋಸಾಗಾಟ : ಆರೋಪಿಗಳು ಪರಾರಿ, ಗೋವುಗಳ ರಕ್ಷಣೆ

ಕೊಡಗು : ಮಡಿಕೇರಿ ತಾಲ್ಲೂಕಿನ ಸಂಪಾಜೆ ಅರಣ್ಯ ತಪಾಸಣಾ ಗೇಟ್ ಬಳಿ ನಿನ್ನೆ ರಾತ್ರಿ ಲಾರಿಯಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದಾಗ ಪತ್ತೆ ಹಚ್ಚಿದ ಇಲಾಖಾ ಅಧಿಕಾರಿಗಳು ಲಾರಿ ಸಮೇತ 24 ಗೋವುಗಳನ್ನು ವಶಕ್ಕೆ ಪಡೆದಿದ್ದಾರೆ.

ಇಲಾಖಾ ಸಿಬ್ಬಂದಿಗಳು ತಪಾಸಣೆಗೆ ಮುಂದಾಗುತ್ತಿದ್ದಂತೆ ಲಾರಿಯಲ್ಲಿದ್ದ ಆರೋಪಿಗಳು ಲಾರಿಯಿಂದ ಜಿಗಿದು ಓಡಿ ಕತ್ತಲ್ಲಲ್ಲಿ ಪರಾರಿಯಾಗಿರುತ್ತಾರೆ. ಆರೋಪಿಗಳು ಗೋವುಗಳನ್ನು ತುಂಬಿಕೊಂಡು ಮಡಿಕೇರಿ ಮಾರ್ಗದಿಂದ ಸುಳ್ಯ ಕಡೆಗೆ ತೆರಳುತ್ತಿದ್ದು ಸಂಪಾಜೆ ಗೇಟ್ ಬಳಿ ತಪಾಸಣೆ ವೇಳೆಗೆ ಅಕ್ರಮ ಗೋ ಸಾಗಾಟ ಬೆಳಕಿಗೆ ಬಂದಿದೆ.

ನಾಲ್ಕು ತಿಂಗಳ ಹಿಂದೆಯೂ ಸಹ ತಡರಾತ್ರಿ ಮದೆನಾಡು ಬಳಿ ಲಾರಿಯೊಂದು ಅಪಘಾತಕ್ಕೀಡಾದಾಗ ಅದರಲ್ಲಿ 25 ಕ್ಕೂ ಹೆಚ್ಚು ಗೋವುಗಳಿದ್ದು ಆರೋಪಿಗಳು ಕೂಡಲೇ ಗೋವುಗಳನ್ನು ಕೆಳಗಿಳಿಸಿ ತಪ್ಪಿಸಿಕೊಂಡಿದ್ದರು. ಸ್ಥಳೀಯರು ಸುತ್ತಮುತ್ತಲಲ್ಲಿದ್ದ ಆ ಗೋವುಗಳನ್ನು ಕೊಂಡೊಯ್ದಿದ್ದರು.

ಸಂಪಾಜೆ ಚೆಕ್ ಪೋಸ್ಟ್ ಮೂಲಕ ನಿರಂತರವಾಗಿ ಕೇರಳ ಮತ್ತು ಮಂಗಳೂರಿನ ಕಸಾಯಿಖಾನೆಗಳಿಗೆ ಸಿಬ್ಬಂದಿಗಳ ಸಹಕಾರದಿಂದಲೇ ಅಕ್ರಮವಾಗಿ ಗೋಸಾಗಾಟವಾಗುತ್ತಿರುವ ಬಗ್ಗೆ ಹಿಂದು ಜಾಗರಣ ವೇದಿಕೆಯು ಹಲವು ಬಾರಿ ಪೋಲೀಸ್ ಇಲಾಖೆಗೆ ಮಾಹಿತಿ ನೀಡಿತ್ತು.

ಇದೀಗ ಪತ್ತೆಯಾದ ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button