ಕಲಬುರ್ಗಿಜಿಲ್ಲಾ ಸುದ್ದಿರಾಜಕೀಯ

ಕಲಬುರಗಿ ಮಾಹಾನಗರ ಪಾಲಿಕೆ ಅಧಿಕಾರ ಹಿಡಿಯುತ್ತೇವೆ: ಎನ್ ರವಿಕುಮಾರ್

ಕಲಬುರಗಿ: ಮಾಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬಂದಿಲ್ಲ ಆದರು ನಾವು ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ಕಲಬುರಗಿ ಪಾಲಿಕೆ ಚುನಾವಣಾ ಉಸ್ತುವಾರಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದ್ದಾರೆ.

ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಬುರಗಿ ಮಾಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬಂದಿಲ್ಲ, ಆದರು ನಮಗೆ ಎಂಪಿ ಎಂಎಲ್ ಎ ಪಕ್ಷೇತರ ಅಭ್ಯರ್ಥಿ ಸೇರಿ 30 ಆಗುತ್ತವೆ. ಜೆಡಿಎಸ್ ಬೆಂಬಲ ಕೇಳುತ್ತೆವೆ ಅವರ ಬೆಂಬಲದೊಂದಿಗೆ ಅಧಿಕಾರ ಹಿಡಿಯುತ್ತೆವೆ ಎಂದು ಹೇಳಿದ್ದಾರೆ. ಜೆಡಿಎಸ್ ಕಾಂಗ್ರೆಸ್ ಗೆ ಬೆಂಬಲ ಕೋಡಲ್ಲ ಅನ್ನೋ ವಿಶ್ವಾಸ ಇದೆ. ಅವರ ಜೊತೆಗೆ ಮಾತುಕತೆ ಮಾಡಿ ಅಧಿಕಾರ ಗದ್ದುಗೆ ಹಿಡಿಯುತ್ತೆವೆ. ಜೆಡಿಎಸ್ ಮುಖಂಡರಿಗೆ ಮನವಿ ಮಾಡುತ್ತೇವೆ. ಈಗಾಗಲೇ ಜೆಡಿಎಸ್ ಮುಖಂಡರ ಜೊತೆಗೆ ಮಾತುಕತೆ ನಡೆಯುತ್ತಿದೆ. ಜೆಡಿಎಸ್ ಬೆಂಬಲಿಗರೊಂದಿಗೆ ಪಾಲಿಕೆ ಅಧಿಕಾರ ಹಿಡಿಯುತ್ತೆವೆ ಎಂದರು.

ಕಲಬುರಗಿ ಮಹಾನಗರ ಪಾಲಿಕೆ ಫಲಿತಾಂಶ ಕಾಂಗ್ರೆಸ್‌ಗೆ ಕಲಿಸಿದ ಪಾಠವಾಗಿದೆ. ಈ ಫಲಿತಾಂಶ ನೋಡಿದ್ರೆ ಕಲಬುರಗಿ ಮತ್ತು ಉತ್ತರ ಕರ್ನಾಟಕ ಜನ ಬಿಜೆಪಿ ಪರ ಇದಾರೆ ಎಂದು ಸ್ಪಷ್ಟವಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಧರ್ಮಸಿಂಗ ರಂತಹ ನಾಯಕರುಳ್ಳ ಕಲಬುರಗಿ ಕಾಂಗ್ರೆಸ್ ಭದ್ರಕೋಟೆಯಲ್ಲಿ ಈ ಬಾರಿ ಭಾರತಿಯ ಜನತಾ ಪಕ್ಷ ಹೆಚ್ಚು ಸ್ಥಾನ ಗೆದ್ದಿವೆ‌. ಇಂತಹ ಕಾಂಗ್ರೆಸ್ ಕೋಟೆಯನ್ನ ಭೇಧಿಸಿ ಬಿಜೆಪಿಗೆ ಜನ ಬೆಂಬಲಿಸಿದ್ದಾರೆ.

ಜೆಡಿಎಸ್‌ಗೆ ನಾಲ್ಕು ಜನ ಸದಸ್ಯರಿಗೆ ಬೆಂಬಲ ನೀಡಲು ಮನವಿ ಮಾಡಿದ್ದೇವೆ. ಈಗಾಗಲೇ ಮೊದಲ ಸುತ್ತಿನ ಮಾತುಕತೆ ಪ್ರಾರಂಭವಾಗಿದೆ. ನೂರಕ್ಕೂ ನೂರರಷ್ಟು ಕಲಬುರಗಿ ಪಾಲಿಕೆ ಮೇಯರ್ ಸ್ಥಾನ ಬಿಜೆಪಿ ಪಾಲಾಗಿದೆ. ಕಲಬುರಗಿಗೆ ಸಚಿವ ಸಿಗದಿರೋದು ಎಲ್ಲೊ ಒಂದು ಕಡೆ ಹಿನ್ನಡೆಯಾಗಿರಬಹುದು. ಇತ್ತ ವಾಡಿ ಪುರಸಭೆ ಎರಡು ವಾರ್ಡ್‌ಗಳ ಉಪಚುನಾಣೆಯಲ್ಲಿ ಸಹ ಬಿಜೆಪಿ ಭರ್ಜರಿ ಜಯ ದಾಖಲಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು‌.

ಅಪರೇಷನ್ ಕಮಲ ನಡೆಯುವುದಿಲ್ಲ:

ಕಲಬುರಗಿ ಕಮಲ ಅರಳೆ ಅರಳುತ್ತೆ. ಆದರೆ ಯಾವುದೇ ಕಾರಣಕ್ಕೂ ಅಪರೇಷನ್ ಕಮಲ ಮಾಡುವುದಿಲ್ಲ. ಶುಕ್ರವಾರ ಮತದಾನ ಇದ್ದ ಕಾರಣ ಬಿಜೆಪಿಗೆ ಸ್ವಲ್ಪ ಹಿನ್ನಡೆಯಾಗಿದೆ. ನಮ್ಮ ಜನರೆಲ್ಲರೂ ಲಕ್ಷ್ಮೀ ಪೂಜೆಯಲ್ಲಿ ಬ್ಯುಸಿ ಆಗಿದ್ದರು‌. ಅದಕ್ಕಾಗಿ ಮತದಾನ ಮಾಡಲು ಬರಲಿಲ್ಲ ಅದು ಸಹ ನಾವು ಕಡಿಮೆ ಸ್ಥಾನ ಪಡೆಯಲು ಕಾರಣವಾಗಿದೆ ಎಂದು ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button