ಜಿಲ್ಲಾ ಸುದ್ದಿಮೈಸೂರು

ನಂದಿನಿ ಹೆಸರಿನ ನಕಲಿ ತುಪ್ಪ ತಯಾರಿಕಾ ಘಟಕದ ಮೇಲೆ ದಾಳಿ

ಮೈಸೂರು : ಕೆಎಂಎಫ್ ನಲ್ಲಿ ತಯಾರಾಗುತ್ತಿದ್ದ ನಂದಿನಿ ತುಪ್ಪಕ್ಕೆ ಪರ್ಯಾಯವಾಗಿ ಮೈಸೂರಿನಲ್ಲಿ ನಂದಿನಿ ಹೆಸರಿನಲ್ಲಿ ನಕಲಿ ತುಪ್ಪದ ತಯಾರಿಕಾ ಘಟಕದ ಮೇಲೆ ಹ್ಯೂಮನ್ ರೈಟ್ಸ್ ತಂಡ ದಾಳಿ ನಡೆಸಿದ್ದಾರೆ.

ಮೈಸೂರು ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹೊಸಹುಂಡಿ ಗ್ರಾಮದಲ್ಲಿದ್ದ ನಕಲಿ ನಂದಿನಿ ತುಪ್ಪ ತಯಾರಿಕಾ ಗೋಡೋನ್ ಮೇಲೆ ಹ್ಯೂಮನ್ ರೈಟ್ಸ್ ತಂಡದ ಉಪಾಧ್ಯಕ್ಷ ಪ್ರದೀಪ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

ನಕಲಿ ನಂದಿನಿ ತುಪ್ಪ ತಯಾರಿಸಿ ಲೋಡ್ ಮಾಡಿ ಮೈಸೂರು ನಗರದಾದ್ಯಂತ ವಿತರಣೆ ಮಾಡಲಾಗುತ್ತಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಹ್ಯೂಮನ್ ರೈಟ್ಸ್ ತಂಡ ದಾಳಿ ನಡೆಸಿದೆ. ನಂದಿನಿ ತುಪ್ಪದ ರೂಪವೇ ಬರಲೆಂದು ಅದಕ್ಕೆ ಡಾಲ್ಡಾ ಮಿಕ್ಸ್ ಮಾಡಿ ನಕಲಿ ತುಪ್ಪ ತಯಾರಿ ಮಾಡಲಾಗುತ್ತಿತ್ತು.

ಈ ನಕಲಿ ತುಪ್ಪವನ್ನು ಪ್ಯಾಕಿಂಗ್​ ಮಾಡುತ್ತಿದ್ದ ವೇಳೆಯೇ ತಂಡದಿಂದ ದಾಳಿ ನಡೆಸಲಾಗಿದೆ. ಚಂದ್ರು ಎಂಬಾತ ಜಾಲದ ರೂವಾರಿಯಾಗಿದ್ದು, ಜೀವನ್ ತುಪ್ಪ ಕಂಪನಿಯವರಿಂದ ಈ ನಕಲಿ ಜಾಲ ಬೆಳಕಿಗೆ ಬಂದಿದೆ.

ವಿಷಯ ತಿಳಿದ ಮೈಮುಲ್ ಎಂ.ಡಿ. ವಿಜಯಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ‌ ತಂಡ ಘಟಕಕ್ಕೆ ಭೇಟಿ ನೀಡಿದಾಗ, ನಕಲಿ ತುಪ್ಪ ಹಾಗೂ ನಂದಿನಿ ಲೇಬಲ್​​ಗಳ ಮುದ್ರಣ ಪತ್ತೆಯಾಗಿದೆ.

ನಾವು ತಿನ್ನುವ ತುಪ್ಪ ನಕಲಿಯೋ ಅಸಲಿಯೋ ಎಂಬುದರ ಬಗ್ಗೆ ಗೊತ್ತಾಗುವುದೇ ಇಲ್ಲಾ ಅಷ್ಟರ ಮಟ್ಟಿಗೆ ಈ ನಕಲಿ ತುಪ್ಪ ತಯಾರಿಸುತ್ತಿದ್ದಾರೆ.

ಈ ಖದೀಮರು, ಘಟನೆ ಸಂಭಂದ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದ್ರೆ ಈ ನಕಲಿ ತುಪ್ಪ ಘಟಕದಲ್ಲಿ ಒಂದು ದೊಡ್ಡ ಜಾಲವೇ ಇರುವ ಶಂಕೆ ವ್ಯಕ್ತವಾಗಿದೆ. ಸಂಪೂರ್ಣವಾಗಿ ತನಿಖೆ ನಡೆಸಿದರೆ ಈ ನಕಲಿ ತುಪ್ಪ ತಯಾರಿಕೆಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಖದೀಮರು ಸಿಕ್ಕಿ ಬೀಳಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button