ಹುಬ್ಬಳ್ಳಿ - ಧಾರವಾಡ

ಧಾರವಾಡದ ಕೆಲಗೇರಿ ಕೆರೆಗೆ ಹಾರಿ ಮಹಿಳೆ‌ ಆತ್ಮಹತ್ಯೆ; ಸ್ಥಳಕ್ಕೆ ಪೊಲೀಸರ ಭೇಟಿ

ಧಾರವಾಡ: ಮಾನಸಿಕ‌ ಅಸ್ವಸ್ಥೆ ಎಂದು ಹೇಳಲಾದ ಮಹಿಳೆಯೊಬ್ಬರು ಬೆಳ್ಳಂಬೆಳಗ್ಗೆ ಕೆರೆಗೆ ಹಾರಿ‌ ಆತ್ಮಹತ್ಯೆ ‌ಮಾಡಿಕೊಂಡಿರುವ ಘಟನೆ ಧಾರವಾಡ ಬಳಿಯ‌ ಕೆಲಗೇರಿಯಲ್ಲಿ ನಡೆದಿದೆ.‌

ಧಾರವಾಡದ ಸಂತೋಷ್ ನಗರ ನಿವಾಸಿ ಅನಿತಾ ಹೆಗಡೆ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಇಂದು ಮುಂಜಾನೆವೇಳೆ‌ ಅನಿತಾ ಮಹಿಳೆಯು ಕೆರೆಗೆ ಹಾರಿದ್ದಾಳೆ ಇದನ್ನು ನೋಡಿದ, ಯುವಕ‌ನೋರ್ವವನ್ನು ಸ್ಥಳಿಯರಿಗೆ ಮಾಹಿತಿ‌ನೀಡಿದ್ದು, ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆಯ ಪೊಲೀಸರು ‌ಈಗ ಮೃತ ದೇಹವನ್ನು ಹೊರ ತೆಗೆಯುವಲ್ಲಿ‌ಯ ಯಶಸ್ವಿಯಾಗಿದ್ದಾರೆ.

ಮೃತ ಮಹಿಳೆ ಅನಿತಾ ಕಳೆದ ಹಲವು ದಿನಗಳಿಂದ‌ ಧಾರವಾಡ ನಗದ ಡಿಮಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಮಹಿಳೆಯ‌ ಮೃತ ದೇಹವನ್ನು‌ ಪೊಲೀಸರು ಜಿಲ್ಲಾ ಆಸ್ಪತ್ರೆಗೆ ರವಾನೆ‌‌ ಮಾಡಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಲರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button