ಧಾರವಾಡ ಜಿಲ್ಲೆಯಾದ್ಯಂತ 85 ಸಾವಿರ ಕೋವಿಡ್ ಲಸಿಕೆ ನೀಡುವ ಗುರಿ

ಧಾರವಾಡ: ರಾಜ್ಯ ವ್ಯಾಪಿಯಲ್ಲಿ ಇಂದು ಬೃಹತ್ ಲಸಿಕ ಅಭಿಯಾನವನ್ನು ಹಮ್ಮಿಕೊಂಡಿದ್ದು, ಧಾರವಾಡ ಜಿಲ್ಲೆಯಾದ್ಯಂತ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಸಾರ್ವಜನಿಕರಿಗೆ ಕೊರೊನಾ ಲಸಿಕೆ ನೀಡಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಮುಂದಾಗಿದೆ. ಜಿಲ್ಲೆಯಾದ್ಯಂತ ಒಟ್ಟು 85 ಸಾವಿರ ಕೋವಿಡ್ ಲಸಿಕೆ ನೀಡಿವ ಗುರಿ ಹೊಂದಲಾಗಿದೆ.
ಬೃಹತ್ ಲಸಿಕೆ ಅಭಿಯಾಕ್ಕೆ ಅಗತ್ಯ ಇರುವ ಲಸಿಕೆಗಳು ಕಳೆದ ದಿನವೇ ಜಿಲ್ಲಾಡಳಿತದ ಕೈ ಸೇರಿದ್ದು. 420ಕ್ಕೂ ಹೆಚ್ಚು ಲಸಿಕಾ ತಂಡಗಳನ್ನು ರಚಿಸಿಲಾಗಿದೆ. ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಏಕಕಾಲಕ್ಕೆ ಎಲ್ಲ ಕಡೆಗಳಲ್ಲಿಯು ಲಸಿಕೆಯನ್ನು ನೀಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಕೋವೀಡ್ ಲಸಿಕಾ ಕೇಂದ್ರಗಳು ಇಲ್ಲದ ಗ್ರಾಮಗಳಿಗೆ ಕಿಮ್ಸ್ ಆಸ್ಪತ್ರೆಯಿಂದ 150 ಲಸಿಕಾ ತಂಡಗಳನ್ನು ರಚಿಸಿ ಲಸಿಕೆ ನೀಡಲಾಗುತ್ತಿದೆ. ಆಧಾರ್ ಕಾರ್ಡ್ ತಗೆದುಕೊಂಡು ಬಂದು ಸಾರ್ವಜನಿಕರು ಲಸಿಕೆ ಪಡೆದುಕೊಳ್ಳಬಹುದಾಗಿದೆ. ಜೂನ್ 26 ಕ್ಕೂ ಮೊದಲು ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದವರು, 28 ದಿನಗಳ ಅವಧಿ ಪೂರ್ಣಗೊಂಡ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದವರು ಇಂದು ಎರಡನೇ ಡೋಸ್ ಪಡೆದುಕೊಳ್ಳಬಹುದಾಗಿದೆ.
ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಲಸಿಕಾ ಅಭಿಯಾನ
ಜಿಲ್ಲಾಡಳಿತ ಬೃಹತ್ ಲಸಿಕೆ ಅಭಿಯಾನ ಯಶಸ್ವಿಗೊಳಿಸಲು ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಲಸಿಕೆಗಳನ್ನು ನೀಡುತ್ತಿದೆ. ನಿನ್ನಯೇ ಅಗತ್ಯ ಲಸಿಕೆಗಳು ಜಿಲ್ಲಾಡಳಿತದ ಕೈ ಸೇರಿದ್ದು, ಇಂದು ಬೆಳಿಗ್ಗೆಗೆ ಲಸಿಕೆ, ಸೂಜಿ ಸೇರಿದಂತೆ ಅಗತ್ಯವಾದ ವೈದ್ಯಕೀಯ ಪರಿಕರಗಳನ್ನು ಸಿದ್ದವಾಗಿರಿಸಿಕೊಂಡು ಲಸಿಕೆ ನೀಡಲು ತೆರಳು ತಂಡಗಳಿಗೆ ನೀಡಲಾಗಿದೆ. ಹಲವು ಎನ್.ಜಿ.ಓಗಳು ಲಸಿಕೆ ನೀಡಲು ತೆರಳುವ ತಂಡಗಳಿಗೆ ಉಪಹಾರ ಪ್ಯಾಕೇಟ್ ಹಾಗೂ ನೀರಿನ ಬಾಟಲಿಗಳನ್ನು ನೀಡಿದರು. ಸುಮಾರು 35 ಕ್ಕೂ ಹೆಚ್ಚು ಬಸ್‌ಗಳನ್ನು ನಿಗದಿ ಪಡಿಸಿ ಮಾರ್ಗವಾರು ಲಸಿಕಾ ತಂಡಗಳನ್ನು ಈಗಾಗಲೇ ಕಳುಹಿಸಿ ಕೋಡಲಾಗಿದೆ.
ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯುವ ಮೂಲಕ ಕೋವಿಡ್ ಮೂರನೆ ಅಲೆಯನ್ನು ತಡೆಯಲು ಇರುವ ಮುಖ್ಯ ಮಾರ್ಗವಾಗಿದೆ ಎಂದು ವೈದ್ಯರು ಹೇಳುತ್ತಿದ್ದು, ಪೋಷಕರು ಲಸಿಕೆ ಪಡೆಯುವ ಮೂಲಕ ಮಕ್ಕಳ ಸುರಕ್ಷಿತಗೆ ಒತ್ತು ನೀಡಬೇಕು ಎಂದು ಜಿಲ್ಲಾಡಳಿತ ಕರೆ ನೀಡಿದೆ. ಎಲ್ಲರೂ ಲಸಿಕೆ ಪಡೆದುಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗಲಿದ್ದು, ಇದರಿಂದಾಗಿ ಕೋವಿಡ್ ಮೂರನೇ ಅಲೆ ತಡೆಯಬಹುದಾಗಿದೆ ಎಂದು ಹೇಳಲಾಗಿತ್ತಿದೆ.




