ಹುಬ್ಬಳ್ಳಿ - ಧಾರವಾಡ

ಕೆಆರ್‌ಎಸ್ ಬಿರುಕು ವಿಚಾರ ಬಿಟ್ಟು ಬೇರೆ ಫೈಟಿಂಗ್ ಆರಂಭವಾಗಿದೆ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಸಂಸದರಾದ ಸುಮಲತಾ ಅಂಬರೀಶ್ ಅವರು ಈ ಹಿಂದೆ ಕೆಆರ್‌ಎಸ್ ಡ್ಯಾಮ್ ಬೀರುಕು ಬಿಟ್ಟ ವಿಚಾರ ಮಾತಾಡಿದರು. ಆದರೆ ಈಗ ಆ ವಿಚಾರ ಬಿಟ್ಟು, ಸುಮಲತಾ ಮತ್ತು ಹೆಚ್‌ಡಿಕೆಯವರ ನಡುವೆ ಮಾತಿನ ಫೈಟಿಂಗ್ ಶುರುವಾಗಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾನು ಕೂಡ ಸಂಸದರಾದ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಹೆಚ್ ಡಿ ಕೆ ಅವರ ನಡುವೆ ನಡೆಯುತ್ತಿರುವ ಮಾತಿನ ಸಮರವನ್ನು ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ನೂರೆಂಟು ವಿಚಾರಗಳು ಇವೆ. ಅವುಗಳ ಬಗ್ಗೆ ಮಾಧ್ಯಮಗಳು ಗಮನಹರಿಸಬೇಕು ಎಂದರು.

ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಸಫರ್ ಆಗುತ್ತಿದ್ದೇವೆ. ಇನ್ನೂ ಕೂಡಾ ರಾಜ್ಯದಲ್ಲಿ ಕೊರೊನಾ 100 ಪ್ರತಿಶತ ಕಡಿಮೆಯಾಗಿಲ್ಲ. ಇದರ ನಡುವೆ ಈಗ ಅಧಿವೇಶನ ನಡೆಸಬೇಕಾಗಿದೆ. ಬೆಂಗಳೂರಿನಲ್ಲಿ ಅಧಿವೇಶನ ನಡೆಸಬೇಕೋ ಅಥವಾ ಬೇಡಾ ಅನ್ನುವ ಕುರಿತು ಈಗ ಚರ್ಚೆಗಳು ನಡೆಯುತ್ತಿವೆ, ಬೆಳಗಾವಿ ಅಥವಾ ಬೆಂಗಳೂರಿನಲ್ಲಿ ಅಧಿವೇಶನ ನಡೆಸಬೇಕು‌ ಎನ್ನುವುದರ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ಇನ್ನೂ ನಡೆದಿಲ್ಲ. ನಾಳೆ ಮುಖ್ಯಮಂತ್ರಿ ಭೇಟಿಯಾಗಿ ಇದರ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button