ಹುಬ್ಬಳ್ಳಿ - ಧಾರವಾಡ

ಬಿಜೆಪಿ-ಕಾಂಗ್ರೆಸ್‌ನಿಂದಾಗಿ ರಾಜ್ಯದ ಜನತೆಗೆ ಸಂಕಷ್ಟ: ಮಾಜಿ ಶಾಸಕ ಕೋನರೆಡ್ಡಿ

ಹುಬ್ಬಳ್ಳಿ : ಕಾಂಗ್ರೆಸ್ – ಬಿಜೆಪಿ ಪಕ್ಷಗಳು ಕೇವಲ ನಾಯಕತ್ವದ ಕಿತ್ತಾಟದಲ್ಲಿ ತೋಡಗಿ ಬಿಟ್ಟಿವೆ, ಇದರಿಂದಾಗಿ ರಾಜ್ಯದಲ್ಲಿ ಆಡಳಿತ ಯಂತ್ರವು ಕುಸಿದು ಹೋಗಿದ್ದು, ಈ ರಾಷ್ಟ್ರೀಯ ಎರಡು ಪಕ್ಷಗಳ ನಾಯಕತ್ವದ ಕಿತ್ತಾಟದಿಂದಾಗಿ ಈಗ ರಾಜ್ಯದ ಜನರು ಸಂಕಷ್ಟ ಎದುರಿಸುವಂತಾಗಿದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಯತ್ನಗಳು ನಡೆದಿವೆ, ಅವರನ್ನು ಕೆಳಗೆ ಇಳಿಸಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ ಬೆಲ್ಲದ್ ಸೇರಿದಂತೆ ಹಲವಾರು ನಾಯಕರು ಸಿಎಂ ಪಟ್ಟಿಕ್ಕೆ ಏರಲು ತೆರೆಮರೆಯ ತಯಾರಿ ನಡೆಸುತ್ತಿದ್ದಾರೆ. ಅಲ್ಲದೆ ಅದೇ ಪ್ರಯತ್ನದಲ್ಲಿ ನಾಯಕರು ಇದ್ದಾರೆ. ಇನ್ನೂ ಕಾಂಗ್ರೆಸ್ ನಲ್ಲಿಯೂ ಮುಖ್ಯಮಂತ್ರಿ ಗಾದಿಗೆ ಕಿತ್ತಾಟ ಆರಂಭವಾಗಿದೆ. ಇದಕ್ಕೆ ಉತ್ತರ ಕರ್ನಾಟಕದ ಭಾಷೆಯಲ್ಲಿ ಕೂಸು ಹುಟ್ಟುವ ಮುಂಚೆಯೇ ಕುಲಾಯಿ ಹೋಲಿಸೋದು ಅನ್ನುವ ಹಾಗೇ ಆಗಿದೆ ಎಂದು ವ್ಯಂಗ್ಯ ಮಾಡಿದರು.

ಇನ್ನೂ ಚುನಾವಣೆ ಆಗಿಲ್ಲಾ ಸಿಎಂ ಆಗಬೇಕಾದರೆ ಚುನಾವಣೆ ಎದುರಿಸಬೇಕು, ಆದರೆ ಕಾಂಗ್ರೆಸ್ ಪಕ್ಷದಲ್ಲಿ ಈಗ ಸಿಎಂ ಸೀಟಗಾಗಿ ಕಿತ್ತಾಟ ಆರಂಭವಾಗಿದೆ. ಸಿಎಂ ಸೀಟ್‌ಗೆ ಸಿದ್ದರಾಮಯ್ಯ, ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ, ಸತೀಶ ಜಾರಕಿಹೊಳಿ ಮೊದಲಾದವರ ಹೆಸರು ತೇಲಿ ಬಿಡಲಾಗುತ್ತಿದೆ, ಅವರವರ ಬೆಂಬಲಿಗರು ನಮ್ಮ ನಾಯಕ ಸಿಎಂ ಆಗಬೇಕು ಎಂದು ಹೇಳುತ್ತಿದ್ದಾರೆ. ಈ ಎಲ್ಲ ಬೆಳವಣಿಗೆ ನೋಡಿದ್ದರೆ, ಸಿಎಂ ಗಾದಿ ಕಿತ್ತಾಟದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಅನ್ನಿಸುತ್ತಿದೆ.ಆದರೆ ಈ ಎರಡು ಪಕ್ಷಗಳ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ, ಎರಡು ರಾಷ್ಟ್ರೀಯ ಪಕ್ಷಗಳ ಆಂತರುಕ ವಿಚಾರಕ್ಕೆ ನಾವು ತಲೆ ಕಡೆಸಿಕೊಳ್ಳುವುದಿಲ್ಲಾ, ಕೊರೊನಾ ದಂತಹ ಸಂದರ್ಭದಲ್ಲಿ ಈ ರೀತಿಯ ಕಿತ್ತಾಟ ಸರಿಯಲ್ಲ. ಸಿಎಂ ಗಾದಿ ಕಿತ್ತಾಟ ಬಿಟ್ಟು ಆಡಳಿತ ಯಂತ್ರದ ಕಡೆಗೆ ಆಡಳಿತ ವೀರೋಧ ಪಕ್ಷಗಳು ಗಮನ ಕೇಂದ್ರೀಕರಿಸಬೇಕು ಎಂದು ಹೇಳಿದರು.

ಆಡಳಿತಾರೂಢ ಪಕ್ಷ ಬೆಲೆ ಏರಿಕೆ ಮಾಡಿಕೊಂಡು ಹೋಗುತ್ತಿದೆ, ಈ ರೀತಿ ಬೆಲೆ ಏರಿಕೆ‌ಮಾಡಿಕೊಂಡು ಆಡಳಿತ ನಡೆಸಯವುದು ಸರಿಯಲ್ಲಾ, ಇದರ ಮಧ್ಯೆ ಈಗ ಕೊರೊನಾ ಮೂರನೇ ಅಲ್ಲೆಯ ಬರಿಉತ್ತಿದೆ ಎಂದು ಹೇಳಲಾಗುತ್ತಿದೆ, ಸರ್ಕಾರ ಮುಖ್ಯವಾಗಿ ಬೆಲೆ ಏರಿಕೆ ಕೈಬಿಟ್ಟು ಕೊರೊನಾ ನಿರ್ವಹಣೆಯ ಕಡೆಗೆ ಗಮನ ಕೋಡಬೇಕು. ಕೊರೊನಾದಿಂದ ಮೃತ ಎಲ್ಲ ಕುಟುಂಬಕ್ಕೂ ಪರಿಹಾರ ನೀಡಬೇಕು, ರಾಜ್ಯ ಬಿಜೆಪಿಗೆ ಆಡಳಿತ ನಡೆಸುವ ಇಚ್ಚೆ ಇದ್ರೆ ನಡೆಸಿಲ್ಲಿ, ಇಲ್ಲವಾದರೆ ರಾಜೀನಾಮೆ ನೀಡಿ‌ ಮನೆಗೆ ಹೋಗಲಿ ಎಂದು ಕೀಡಿಕಾರಿದರು‌.

Spread the love

Related Articles

Leave a Reply

Your email address will not be published. Required fields are marked *

Back to top button