ಹುಬ್ಬಳ್ಳಿ - ಧಾರವಾಡ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಐಎಲ್ಎಸ್ ಲ್ಯಾಂಡಿಂಗ್ ಸೇವೆ; ಇನ್‌ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಂ ಮೂಲಕ ಸಮಸ್ಯೆಗೆ ಪರಿಹಾರ

ಹುಬ್ಬಳ್ಳಿ: ದಟ್ಟವಾದ ಮೋಡ, ಭಾರೀ ಮಳೆ, ಮಂಜು ಮುಸುಕಿದ ವಾತಾವರಣವಿದ್ದರೂ ಇನ್ನು ಮುಂದೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನಗಳು ನಿರಾಂತಕವಾಗಿ, ಸುರಕ್ಷಿತವಾಗಿ ಇಳಿಸಬಹುದಾಗಿದೆ. ಈ ಹಿಂದೆ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಲ್ಯಾಂಡಿಂಗ್ ಸಮಸ್ಯೆಯಾಗುತ್ತಿತ್ತು. ಹಾಗಾಗಿ ಈಗ ವಿಮಾನ ನಿಲ್ದಾಣದಲ್ಲಿ ಇನ್‌ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಂ‌ (ಐಎಲ್‌ಎಸ್)ನ್ನು ಅಳವಡಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ.

ಈ ಹಿಂದೆ ಮೂರು ನಾಲ್ಕು ಬಾರಿ ಹವಾಮಾನ ವೈಪರೀತ್ಯದಿಂದ ಹುಬ್ಬಳ್ಳಿಯಲ್ಲಿ ಇಳಿಯಬೇಕಾಗಿದ್ದ ವಿಮಾನವನ್ನು ಮಂಗಳೂರು, ಬೆಂಗಳೂರು ಸೇರಿದಂತೆ ಬೇರೆ ಬೇರೆ ವಿಮಾನ ನಿಲ್ದಾಣಗಳಿಗೆ ಕಳುಹಿಸಿ ನಾಲ್ಕಾರು ಗಂಟೆಗಳ ಬಳಿಕ ವಾಪಸ್ ಇಲ್ಲಿ ಬಂದು‌ ಲ್ಯಾಂಡ್ ಮಾಡಿಸಲಾಗಿತ್ತು. ಕೆಲ ವಿಮಾನ ಆಗಸದಲ್ಲೇ ಅರ್ಧ ಗಂಟೆ, ಗಂಟೆಗಳ ಕಾಲ ಸುತ್ತು ಹೊಡೆದು ಬಳಿಕ ಸುರಕ್ಷಿತವಾಗಿ ಇಳಿಸಲಾಗಿತ್ತು. ಆದರೆ ಇನ್ನುಮುಂದೆ ಇಂತಹ ಯಾವುದೇ ಸಮಸ್ಯೆಗಳು ಕೂಡ ಎದುರಾಗದು. ಈಗಾಗಲೇ ಐಎಲ್‌ಎಸ್ ವ್ಯವಸ್ಥೆ ಕಾಮಗಾರಿ ಪೂರ್ಣಗೊಂಡಿದ್ದು, ಇಂದು ಸಾಂಕೇತಿಕವಾಗಿ ‌ಚಾಲನೆ ನೀಡಲಾಗಿದೆ. ಇನ್ನುಮುಂದೆ ಲ್ಯಾಂಡಿಂಗ್ ಸಮಸ್ಯೆ ಎದುರಾಗದು.

2020ರ ಜನವರಿಯಿಂದ, ರೆಡ್, ಟವರ್‌ ಅಳವಡಿಕೆ ಕಾಮಗಾರಿ ನಡೆದಿತ್ತು. ನವೆಂಬರ್‌ನಲ್ಲಿಯೇ ಇದರ ಕಾರ್ಯ ಬಹುತೇಕ ಪೂರ್ಣಗೊಂಡಿತ್ತು. ಆದರೆ, ಕೊರೋನಾ ಸೇರಿ ಇತರ ಕಾರಣದಿಂದ ಪರಿಶೀಲನಾ ಕಾರ್ಯ ಈ ವರ್ಷ ನಡೆಸಲು ನಿಶ್ಚಯಿಸಲಾಯಿತು. ಈಗಾಗಲೇ ಮೂರು ಹಂತದ ಪ್ರಾಯೋಗಿಕತೆ ಪೂರ್ಣಗೊಂಡಿದ್ದು, ಕಳೆದ ದಿನದಿಂದ ಐಎಲ್ಎಸ್ ಲ್ಯಾಂಡಿಂಗ್ ಕಾರ್ಯಾರಂಭ ಮಾಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button