ಹುಬ್ಬಳ್ಳಿ - ಧಾರವಾಡ

ಕಲಘಟಗಿ: ಕೊರೊನಾ ರೂಲ್ಸ್ ಬ್ರೇಕ್; 14 ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಎಫ್‌ಐರ್

ಧಾರವಾಡ: ಕಳೆದ ದಿನ ಮಾಜಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ಕೈಗೊಂಡ ರಾಷ್ಟ್ರ ಧ್ವಜ ಮೆರವಣಿಗೆಯಲ್ಲಿ ಕೊರೊನಾ ರೂಲ್ಸ್ ಬ್ರೆಕ್ ಆಗಿದ್ದು, ಈ ಕುರಿತು ಈಗ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಒಟ್ಟು 14 ಜನ ಕೈ ಕಾರ್ಯಕರ್ತರ ಮೇಲೆ ಕಲಘಟಗಿ ಪೊಲೀಸರು ಎಫ್ ಐ ಆರ್ ದಾಖಲು ಮಾಡಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ, ಕಲಘಟಗಿ ಮಾಜಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ, ತಡ ಕ್ರಾಸ್ ‌ನಿಂದ ರಾಷ್ಟ್ರ ಧ್ವಜವನ್ನು ಕಲಘಟಗಿ ತಾಲೂಕಿನ ಕಡೆಗೆ ಮೇರವಣಿಗೆ ಮೂಲಕ ತೆಗೆದುಕೊಂಡ ಹೊಗಲಾಗಿತ್ತು. ಎರಡು ಕಿಲೋಮೀಟರ್‌ಷ್ಟು ಉದ್ದವಿರುವ ರಾಷ್ಟ್ರ ಧ್ವಜವನ್ನು ಮೇರವಣಿಗೆ ಮೂಲಕ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ, ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಕೊರೊನಾ ರೂಲ್ಸ್ ಬ್ರೇಕ್ ಮಾಡಿ ಭಾಗವಹಿಸಿದ್ದರು. ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೆ ಸಾರ್ವಜನಿಕರು ಸಂಪೂರ್ಣವಾಗಿ ಕೋವಿಡ್ ನಿಯಮ ಗಾಲಿಗೆ ತೂರಿ ಭಾಗವಹಿಸಿದ್ದರು. ಕೊನೆಗೂ ಎಚ್ಚೆತ್ತುಕೊಂಡಿರುವ ಕಲಘಟಗಿ ಪೊಲೀಸರು ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಕೇಸ್ ದಾಖಲು ಮಾಡಿದ್ದಾರೆ.

ಲಾಡ್ ಹೆಸರು ಕೈಬಿಟ್ಟು ದೂರು ದಾಖಲು:

ಮಾಜಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ನಡೆದ ರಾಷ್ಟ್ರ ಮೆರವಣಿಗೆಯಲ್ಲಿ ಕೊರೊನಾ ರೂಲ್ಸ್ ಬ್ರೆಕ್ ಆಗಿದ್ದರೂ ಕಲಘಟಗಿ ಪೊಲೀಸರು ಮಾತ್ರ ಮಾಜಿ ಸಚಿವ ಲಾಡ್ ಅವರನ್ನು ಪ್ರಕರಣದಿಂದ ಹೊರಗಿಟ್ಟು, ಕಾಂಗ್ರೆಸ್ ಕಾರ್ಯಕರ್ತರ 14 ಜನ ಮೇಲಷ್ಟೇ ಕೇಸ್ ದಾಖಲು ಮಾಡಿದ್ದಾರೆ. ಕಲಘಟಗಿ ಪೊಲೀಸರ ನಡೆ ಈಗ ಸಾರ್ವಜನಿಕರ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅಲ್ಲದೆ ಕಲಘಟಗಿ ಪೊಲೀಸರ ನಡೆಯನ್ನು ಅನುಮಾನದಿಂದ ನೋಡುವಂತೆ ಮಾಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button