ಹುಬ್ಬಳ್ಳಿ - ಧಾರವಾಡ

ಯಡಿಯೂರಪ್ಪನವರನ್ನು ಸಿಎಂ ಮಾಡಿದ್ದೇ ನಾನು: ಚಂದ್ರಕಾಂತ ಬೆಲ್ಲದ

ಧಾರವಾಡ: 1991ರಲ್ಲಿ ರಾಜ್ಯದಲ್ಲಿ ಒಬ್ಬರೇ ಬಿಜೆಪಿ ಶಾಸಕರಿದ್ದರು. ನಂತರ ಬಿಜೆಪಿ ಪಕ್ಷವನ್ನು ಬೆಳೆಸಿ, ಅಂದು ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ್ದೇ ನಾನು. ಈ ವಿಚಾರ ಎಲ್ಲರಿಗೂ ಗೊತ್ತಿದೆ ಎಂದು ಹಾಲಿ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರ ತಂದೆ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು.

ಶಾಸಕ ಅರವಿಂದ ಬೆಲ್ಲದವರಿಗೆ ಸಚಿವ ಸ್ಥಾನ ಮತ್ತೊಂದು ನೀಡುವುದು ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಅವರಿಗೆ ಸಚಿವ ಸ್ಥಾನ ಸಿಗಬೇಕು ಎನ್ನುವುದು ಕ್ಷೇತ್ರದ ಜನತೆಯ ಆಸೆ ಎಂದರು.

ಧಾರವಾಡ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಹೇಗೆ ಕಟ್ಟಿ ಬೆಳಸಿದೆ ಅನ್ನುವುದು ಎಲ್ಲರಿಗೂ ಗೊತ್ತಿದೆ. ನಾನು ಪಕ್ಷದಲ್ಲಿ ಇದ್ದಾಗ ಅಂದು ಯಡಿಯೂರಪ್ಪನವರನ್ನು ಯಾರು ಮುಖ್ಯಂಮತ್ರಿ ಮಾಡಿದರು ಎಂಬುವುದು ಅವರಿಗೆ ಗೊತ್ತಿದೆ. ಆದರೆ ನನಗೆ ಸಚಿವ ಸ್ಥಾನ ನೀಡಲಿಲ್ಲ. ಆ ನೋವು ನನಗೆ ಇಲ್ಲ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button