ರಾಜಕೀಯಹುಬ್ಬಳ್ಳಿ - ಧಾರವಾಡ

ಅಸಮಾಧಾನ ಸಹಜ, ಎಲ್ಲವೂ ಸರಿಹೋಗುತ್ತೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಖಾತೆ ಹಂಚಿಕೆ ಮಾಡಿದಾಗ ಅಸಮಾಧಾನ ಆಗುವುದು ಸಹಜ. ಆನಂದ್ ಸಿಂಗ್ ನಾಳೆ ಭೇಟಿ ಮಾತನಾಡುತ್ತೆನೆ ಅಂದಿದ್ದಾರೆ. ಭೇಟಿಯಾದಾಗ ಅಲ್ಲಿ ಚರ್ಚೆ ನಡೆಸಿ ಎಲ್ಲವನ್ನೂ ಸರಿ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವ ಖಾತೆ ಕೇಳಿದ್ದರು ಎನ್ನುವುದನ್ನು ಬಹಿರಂಗಪಡಿಸೋಕೆ ಆಗಲ್ಲ ಎಂದರು.

ಪ್ರೀತಂಗೌಡ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಪ್ರೀತಂಗೌಡ ಯುವ ಉತ್ಸಾಹಿ ಶಾಸಕ. ಉತ್ಸಾಹದಲ್ಲಿ ಹೇಳಿಕೆ ನೀಡಿದ್ದಾರೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button