ಜಿಲ್ಲಾ ಸುದ್ದಿ

ಅನಾಥ ವ್ಯಕ್ತಿಗೆ ಆರೈಕೆ; ಮಾನವೀಯತೆ ತೋರಿದ ಸಾಮಾಜಿಕ ಸೇವಾ ಸಂಸ್ಥೆ

ಚಿಕ್ಕಮಗಳೂರು: ಶಾಲೆಯೊಂದರ ಬಳಿ ಅನಾಥವಾಗಿ ಮಲಗಿದ್ದ ವ್ಯಕ್ತಿಯನ್ನು ಕಂಡು ಮೂಡಿಗೆರೆಯ ಸಕ್ರಿಯ ಸಾಮಾಜಿಕ ಸೇವಾ ಸಂಸ್ಥೆ ತಂಡದವರು ಆತನಿಗೆ ಕ್ಷೌರ ಮತ್ತು ಸ್ನಾನ ಮಾಡಿಸಿ ಹೊಸವಸ್ತ್ರ ತೊಡಿಸಿ ಬಳಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ವ್ಯಕ್ತಿಯನ್ನು ಬಿಳಗುಳ ಗ್ರಾಮದ ಆರ್ಮುಗ (65) ಎಂದು ಗುರುತಿಸಲಾಗಿದೆ. ಮಲಯಾಳಂ ಮಾತನಾಡುವ ಈತ ಬಿಳುಗುಳ ಅಂಬೇಡ್ಕರ್ ಸ್ಕೂಲ್ ಬಳಿ ಅನಾಥರಾಗಿ ಬಿದ್ದಿದ್ದ. ಸಣ್ಣ ಸಣ್ಣ ಹುಳಗಳು ಮೈಮೇಲೆ ಹರಿದಾಡುತ್ತಿದ್ದವು. ಹೊಟ್ಟೆಗಿಲ್ಲದೆ ಹಸಿವಿನಿಂದ ಒದ್ದಾಡುತ್ತಿದ್ದ.

ಸಾಮಾಜಿಕ ಸಕ್ರಿಯ ಸಂಸ್ಥೆಯ ಅಧ್ಯಕ್ಷ ಪಿಶ್ ಮೊಣು, ಕಾರ್ಯಾಧ್ಯಕ್ಷ ಅಬ್ದುಲ್ ರಹಿಮಾನ್ಹ, ಹಸೈನಾರ್ ಬಿಳುಗುಳ, ಮುಸ್ತಫ ಇದ್ದರು. ಮೂಡಿಗೆರೆ ಪಿಎಸೈ ರವಿ ಹಾಗೂ ಸಿಬ್ಬಂದಿ, ತಹಸೀಲ್ದಾರ್‌, ಎಂಜಿಎಂ ಆಸ್ಪತ್ರೆಯ ವೈದ್ಯ ಮಧುಸೂದನ್ ಸಹಕಾರ ನೀಡಿದ್ದಾರೆ.

 

Spread the love

Related Articles

Leave a Reply

Your email address will not be published. Required fields are marked *

Back to top button